ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: 14 ಜೋಡಿ ಉಚಿತ ಸಾಮೂಹಿಕ ವಿವಾಹ

Last Updated 3 ಮೇ 2022, 13:51 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಗರದ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿ ಮಂಗಳವಾರ 14 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಹಾಗೂ ಬಸವ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.

ವಾಲ್ಮೀಕಿ ನಾಯಕ ಸಮಾಜದ 5, ಚಲುವಾದಿ–3, ಲಿಂಗಾಯತರು, ಭೋವಿ ತಲಾ 2, ಮರಾಠ, ಜಂಗಮ ತಲಾ 1 ಜೋಡಿ ವಿವಾಹವನ್ನು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಪೀಠಾಧಿಪತಿ ಬಸವಲಿಂಗ ಸ್ವಾಮೀಜಿ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, 47 ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲಾಗುತ್ತಿದೆ. ಬಸವಣ್ಣನವರ ಉದಾತ್ತ ವಿಚಾರಗಳೇ ಸರ್ವಧರ್ಮ ಸಾಮೂಹಿಕ ವಿವಾಹ ಸಂಘಟಿಸಲು ಪ್ರೇರಣೆ ಎಂದು ಹೇಳಿದರು.

ಕಲ್ಯಾಣ ಕ್ರಾಂತಿಯ ಮೂಲಕ ನವ ಸಮಾಜದ ನಿರ್ಮಾಣಕ್ಕೆ ಬಸವೇಶ್ವರರು ಅಡಿಪಾಯ ಹಾಕಿದರು. ಎಲ್ಲರನ್ನೂ ಒಳಗೊಂಡ ಬಸವತತ್ವ, ಶರಣ ತತ್ವ ಅನುಸರಿಸಲು ಪ್ರೇರೇಪಿಸಬೇಕು ಎಂದು ತಿಳಿಸಿದರು.

ಮರಿಯಮ್ಮನಹಳ್ಳಿಯ ಮಲ್ಲಿಕಾರ್ಜುನ ಶಿವಾಚಾರ್ಯರು, ಎಲ್ಲ ಧರ್ಮೀಯರನ್ನು ಒಂದು ಕಡೆ ಸೇರಿಸಿ ಸರ್ವಧರ್ಮ ರಥೋತ್ಸವ ಮಾಡಿದ ಕೀರ್ತಿ ಕೊಟ್ಟೂರು ಮಠ, ಸಂಗನಬಸವ ಸ್ವಾಮೀಜಿ ಅವರಿಗೆ ಸಲ್ಲುತ್ತದೆ ಎಂದರು.

ಸಿದ್ಧಲಿಂಗ ಸ್ವಾಮೀಜಿ, ಮರಿ ದೇವರು, ಪರ್ವತ ದೇವರು, ಮುಖಂಡರಾದ ಮೊಹಮ್ಮದ್ ಇಮಾಮ್ ನಿಯಾಜಿ, ಗೊಗ್ಗ ಚನ್ನಬಸವರಾಜ, ಸಾಲಿ ಬಸವರಾಜ, ಸಾಲಿ ಸಿದ್ದಯ್ಯ ಸ್ವಾಮಿ ಇತರರಿದ್ದರು. ಕಾರ್ಯಕ್ರಮಕ್ಕೂ ಮುನ್ನ ನಗರದ ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನದಿಂದ ಮಠದ ವರೆಗೆ ಬಸವಣ್ಣನವರ ಭಾವಚಿತ್ರದ ಮೆರವಣಿಗೆ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT