ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮುಕ್ತವಾಗಿ ಓಡಾಡಿದ ಕರಡಿ

ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಗಿರಿಸೀಮೆಯಲ್ಲಿ ಕರಡಿಯೊಂದು ಮುಕ್ತವಾಗಿ ಓಡಾಡಿರುವ ವಿಡಿಯೊ ವೈರಲ್ ಆಗಿದೆ.
ಗಿರಿಸೀಮೆಯ ಮಧ್ಯದಲ್ಲಿರುವ ರಸ್ತೆ, ಗಿಡ–ಮರಗಳ ನಡುವೆ ಕರಡಿಯೊಂದು ಬುಧವಾರ ಮಧ್ಯಾಹ್ನ ಓಡಾಡಿದೆ. ಇದನ್ನು ಗಮನಿಸಿದ ಅಲ್ಲಿನ ವಿದ್ಯಾರ್ಥಿಗಳು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ವಿಶ್ವವಿದ್ಯಾಲಯದಿಂದ ಸ್ವಲ್ಪವೇ ದೂರದಲ್ಲಿ ಕರಡಿಧಾಮವಿದೆ. ಜನರ ಓಡಾಟ ಕಡಿಮೆ ಇರುವುದರಿಂದ ಆಗಾಗ ಕರಡಿ, ಚಿರತೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಗಿರಿಸೀಮೆಯಲ್ಲಿ ಕರಡಿಯೊಂದು ಮುಕ್ತವಾಗಿ ಓಡಾಡಿರುವ ದೃಶ್ಯ ಇಲ್ಲಿದೆ#Hampi pic.twitter.com/7xoC1EIblK
— Prajavani (@prajavani) June 23, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.