ಹೊಸಪೇಟೆ (ವಿಜಯನಗರ): ಹಂಪಿ ಉತ್ಸವ ಫೆ.28ರಿಂದ ಮಾರ್ಚ್ 2ರವರೆಗೆ ನಡೆಯಲಿದ್ದು, ಅದಕ್ಕೆ ಮೂರು ದಿನ ಮೊದಲೇ ‘ವಿಜಯನಗರ ವೈಭವ‘ ಧ್ವನಿ ಬೆಳಕಿನ ಕಾರ್ಯಕ್ರಮ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.

ಹಂಪಿಯ ಗಾಯತ್ರಿ ಪೀಠ ಸಮೀಪ ಪ್ರಧಾನ ವೇದಿಕೆ ನಿರ್ಮಾಣ ನಡೆಯಲಿದ್ದು, ಬುಧವಾರ ಸ್ಥಳ ವೀಕ್ಷಿಸಿದ ಬಳಿಕ ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು. ಭಾರಿ ಜನಪ್ರಿಯವಾಗಿರುವ ಈ ಧ್ವನಿ ಬೆಳಕನ್ನು ಉತ್ಸವದ ದಿನಗಳಲ್ಲದೆ, ಉತ್ಸವ ಕೊನೆಗೊಂಡ ಬಳಿಕ ಏಳು ದಿನ ಮುಂದುವರಿಸಲಾಗುವುದು ಎಂದರು.

‘120x80 ಅಡಿ ಮುಖ್ಯ ವೇದಿಕೆಗೆ ಹಂಪಿ ಉತ್ಸವದ ರೂವಾರಿ ದಿ.ಎಂ.ಪಿ.ಪ್ರಕಾಶ್ ಅವರ ಹೆಸರು ಇಡಲು ನಿರ್ಧರಿಸಲಾಗಿದೆ. ಒಟ್ಟು ನಾಲ್ಕು ವೇದಿಕೆಗಳ ನಿರ್ಮಾಣ ನಡೆಯಲಿದೆ. ಮೂರು ದಿನಗಳಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಜನರು ಉತ್ಸವಕ್ಕೆ ಬರುವ ನಿರೀಕ್ಷೆ ಇದೆ. ಕಳೆದ ವರ್ಷ 5 ಲಕ್ಷಕ್ಕೂ ಅಧಿಕ ಮಂದಿ ಬಂದಿದ್ದರು. ₹20 ಕೋಟಿ ಅನುದಾನದ ಪ್ರಸ್ತಾಪವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. 100 ಎಕರೆ ಜಾಗದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಉತ್ಸವದ ಜತೆಗೆ ವಿಜಯನಗರದ ಗತವೈಭವವನ್ನೂ ಜನರು ಗಮನಿಸಬೇಕು ಎಂಬ ಕಾರಣಕ್ಕೆ ಮೂರು ವೇದಿಕೆಗಳು ಸ್ಮಾರಕಗಳ ಸಮೀಪದಲ್ಲೇ ಇರುತ್ತವೆ. ಕಳೆದ ವರ್ಷವೂ ಇದೇ ರೀತಿಯ ವ್ಯವಸ್ಥೆ ಇತ್ತು. ಬಯಲು ವಸ್ತುಸಂಗ್ರಹಾಲಯ ಎಂದೇ ಖ್ಯಾತವಾದ ಹಂಪಿಯನ್ನು ಆಗಸದಿಂದ ನೋಡುವ ಅವಕಾಶ ಕಲ್ಪಿಸುವ ‘ಹಂಪಿ ಬೈ ಸ್ಕೈ’ ಹೆಲಿಕಾಪ್ಟರ್ ಹಾರಾಟ, ಶ್ವಾನ, ಕುರಿ ಪ್ರದರ್ಶನ, ಕುಸ್ತಿ ಪಂದ್ಯಾವಳಿ, ಚಕ್ಕಡಿ ಬಂಡಿ ಗಾಲಿ ಜೋಡಿಸುವ ಸ್ಪರ್ಧೆಗಳು ನಡೆಯಲಿವೆ. ಮಾತಂಗ ಪರ್ವತ ಮೈದಾನದಲ್ಲಿ ವಸ್ತು ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗುವುದು. ಇಲ್ಲಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳಿಂದ ವಿಶೇಷ ಪ್ರದರ್ಶನ ಏರ್ಪಡಿಸಲಾಗುತ್ತದೆ’ ಎಂದು ಡಿ.ಸಿ ಹೇಳಿದರು.

‘ಈ ಬಾರಿ ವಿಜಯ ವಿಠಲ ಮಂದಿರದ ಆವರಣದಲ್ಲಿ ಉತ್ಸವ ಎರಡನೇ ದಿನ ಮುಂಜಾನೆ ಸಾಮೂಹಿಕ ಯೋಗಾಭ್ಯಾಸ ಆಯೋಜನೆಗೆ ಚಿಂತನೆ ನಡೆಸಲಾಗಿದೆ. ಹಂಪಿ ಉತ್ಸವದ ಕುರಿತು ಪ್ರಚಾರ ನಡೆಸುವ ದೃಷ್ಟಿಯಿಂದ ಹವ್ಯಾಸಿ ಬೈಕ್ ರೈಡರ್ ತಂಡವೊಂದು ಬೆಂಗಳೂರಿನಿಂದ ಹಂಪಿವರೆಗೆ ಬೈಕ್ ರ್ಯಾಲಿ ನಡೆಸಲಿದೆ’ ಎಂದರು.

ತುಂಗಾರತಿ, ವಸಂತ ವೈಭವ: ‘ಹಂಪಿ ಉತ್ಸವಕ್ಕೆ ಹೊಸಪೇಟೆ ನಗರದಲ್ಲಿ ವಸಂತ ವೈಭವ ಮೆರವಣಿಗೆ ಮೂಲಕ ಫೆ.27ರಂದು ಅಧಿಕೃತ ಚಾಲನೆ ಸಿಗಲಿದೆ. ಅದೇ ದಿನ ಸಂಜೆ ಮನಮೋಹಕ ತುಂಗಾರತಿ ಹಂಪಿ ವಿರೂಪಾಕ್ಷ ದೇವಸ್ಥಾನದ ಬಳಿ ತುಂಗಾ ನದಿ ತೀರದಲ್ಲಿ ನಡೆಯಲಿದೆ. ಹಂಪಿ ಉತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಉತ್ಸವಕ್ಕೆ ಬರಲಿರುವ ಸಿನಿಮಾ ನಟರು, ರಾಷ್ಟ, ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿದರ ಪಟ್ಟಿ ಸಿದ್ಧಪಡಿಸುವ ಕಾರ್ಯ ಆರಂಭವಾಗಿದೆ’ ಎಂದು ಜಿಲ್ಲಾಧಿಕಾರಿ ದಿವಾಕರ್ ಹೇಳಿದರು.

70 ಸಾವಿರ ಆಸನ

ಗಾಯತ್ರಿ ಪೀಠ ಸಮೀಪದ ಪ್ರಧಾನ ವೇದಿಕೆ ಮುಂಭಾಗ 50 ಸಾವಿರ ಮತ್ತು ಸುತ್ತಮುತ್ತ 20 ಸಾವಿರದಷ್ಟು ಹೀಗೆ 70 ಸಾವಿರದಷ್ಟು ಆಸನ ವ್ಯವಸ್ಥೆ ಕಲ್ಪಿಸಾಗುವುದು. ಎದುರು ಬಸವಣ್ಣ ಮಂಟಪದ ಆವರಣ, ವಿರೂಪಾಕ್ಷ ದೇವಸ್ಥಾನ, ಸಾಸಿವೆ ಕಾಳು ಗಣಪ ಮಂಟಪದ ಬಳಿ ಸಮಾನಂತರ ವೇದಿಕೆಗಳನ್ನು ನಿರ್ಮಿಸಲಾಗುವುದು. ಇಲ್ಲೂ 10 ಸಾವಿರಕ್ಕಿಂತ ಅಧಿಕ ಆಸನಗಳು ಇರಲಿವೆ. ಈ ವೇದಿಕೆಗಳಲ್ಲಿ ನಾಡಿನ ಹೆಸರಾಂತ ಕಲಾವಿದರು ಶಾಸ್ತ್ರೀಯ ಹಾಗೂ ಜಾನಪದ ಕಲೆಗಳನ್ನು ಅನಾವರಣಗೊಳಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

‘ವಿರೂಪಾಕ್ಷ ದೇವಸ್ಥಾನ ವೇದಿಕೆಯಲ್ಲಿ ಮಹಿಳಾ ಗೋಷ್ಠಿ, ಕವಿಗೋಷ್ಠಿ, ಹಂಪಿ ಇತಿಹಾಸ ಸಾರುವ ಗೋಷ್ಠಿಗಳನ್ನು ಆಯೋಜಿಸಲಾಗುವುದು. ಕಳೆದ ಮೂರು ಬಾರಿ ಹಂಪಿ ಉತ್ಸವದಲ್ಲಿ ಭಾಗವಹಿಸಿ ಪ್ರದರ್ಶನ ನೀಡದೆ ಇರುವ ಕಲಾವಿದರು ಹಾಗೂ ಸ್ಥಳೀಯ ಕಲಾವಿದರಿಗೆ ಈ ಬಾರಿಯ ಉತ್ಸವದಲ್ಲಿ ಆದ್ಯತೆ ನೀಡಲಾಗುವುದು’ ಎಂದರು.

ಮೊದಲ ದಿನ ಉಚಿತ ಬಸ್

‘ಉತ್ಸವಕ್ಕೆ ಆಗಮಿಸುವ ಜನರಿಗೆ ಮೊದಲ ದಿನ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಮೊದಲ ದಿನ ಜಿಲ್ಲೆಯ ನಾನಾ ಕಡೆಗಳಿಂದ 250 ವಿಶೇಷ ಬಸ್ಗಳನ್ನು ವ್ಯವಸ್ಥೆ ಮಾಡಲಾಗುವುದು. ಮುಂದಿನ ಎರಡು ದಿನ ಹೊಸಪೇಟೆಯಿಂದ ಹಂಪಿಗೆ ಉಚಿತ ಬಸ್ ಸೇವೆ ಇರಲಿದ್ದು, 45 ಬಸ್ಗಳು ನಿರಂತರ ಓಡಾಟ ನಡೆಸಲಿವೆ. ಕಂಪ್ಲಿಯಿಂದಲೂ ಹೆಚ್ಚುವರಿ ಬಸ್ಗಳ ಓಡಾಟ ನಡೆಯಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.