ಹೂವಿನಹಡಗಲಿ (ವಿಜಯನಗರ) : ತಾಲ್ಲೂಕಿನ ತಿಪ್ಪಾಪುರ ಗ್ರಾಮದ ಗಡಿ ದುರುಗಮ್ಮ ದೇವಸ್ಥಾನ ಹಿಂಭಾಗದ ಪಾಳು ಬಾವಿಗೆ ಬಿದ್ದು ಯುವಕನೋರ್ವ ಮೃತಪಟ್ಟಿರುವ ಘಟನೆ ಜರುಗಿದೆ.
ಕೊಯಿಲಾರಗಟ್ಟಿ ಗ್ರಾಮದ ಸಿಂಗಟಾಲೂರು ವೀರೇಶ (32) ಮೃತರು. ಶನಿವಾರ ಸ್ನೇಹಿತರೊಂದಿಗೆ ಊಟಕ್ಕೆ ತೆರಳಿದ್ದ ಯುವಕ ಊಟ ಮುಗಿಸಿಕೊಂಡು ಬಾವಿ ಹತ್ತಿರದ ಹುಣಸೆ ಮರ ಏರಿದ್ದಾನೆ. ಆಕಸ್ಮಿಕವಾಗಿ ಮರದಿಂದ ಬಾವಿಗೆ ಬಿದ್ದು ಸಾವಿಗೀಡಾಗಿದ್ದಾನೆ ಎಂದು ಮೃತನ ಸಂಬಂಧಿಗಳು ನೀಡಿದ ದೂರಿನನ್ವಯ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.