ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಿಯಮ್ಮನಹಳ್ಳಿ: ಮಧ್ಯಾಹ್ನದವರೆಗೆ ಮತದಾನ ಬಹಿಷ್ಕಾರ

Published 7 ಮೇ 2024, 11:01 IST
Last Updated 7 ಮೇ 2024, 11:01 IST
ಅಕ್ಷರ ಗಾತ್ರ

ಮರಿಯಮ್ಮನಹಳ್ಳಿ (ವಿಜಯನಗರ ಜಿಲ್ಲೆ): ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ  ಸಮೀಪದ ಚಿಲಕಹಟ್ಟಿಯ ಮಾರುತಿನಗರದ 413 ಮತದಾರರು ಪ್ರತ್ಯೇಕ ಮತಗಟ್ಟೆಗೆ ಒತ್ತಾಯಿಸಿ ಮಂಗಳವಾರ ಸುಮಾರು ಆರು ಗಂಟೆ ಮತದಾನ ಬಹಿಷ್ಕಾರ ಮಾಡಿದರು.

ಚಿಲಕನಟ್ಟಿ ಗ್ರಾಮದಲ್ಲಿ 1,700 ಮತದಾರರಿಗೆ ಎರಡು ಮತಗಟ್ಟೆ ಇದ್ದು, ಮಾರುತಿನಗರದ ಉಳಿದ 413 ಮತದಾರರನ್ನು 3ಕಿ. ಮೀ ದೂರದ ಹಾರುವನಹಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 78 ರಲ್ಲಿ ಮತದಾನ ಮಾಡಬೇಕಿರುವುದರಿಂದ ಮತದಾನ ಬಹಿಷ್ಕಾರಕ್ಕೆ ಮುಂದಾದರು.

ಕಳೆದ ಹಲವಾರು ಚುನಾವಣೆಗಳಿಂದ ಪ್ರತ್ಯೇಕ ಮತಗಟ್ಟೆ ಮಾಡುವಂತೆ ಒತ್ತಾಯ ಮಾಡುತ್ತಾ ಬಂದರೂ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆಂದು ಗ್ರಾಮಸ್ಥರು ದೂರಿದರು.

ಬೆಳಿಗ್ಗೆಯಿಂದ ಮತದಾನ ಮಾಡದೇ ಪ್ರತ್ಯೇಕ ಮತದಾನ ಕೇಂದ್ರ ಮಾಡುವಂತೆ ಪಟ್ಟು ಹಿಡಿದ ಗ್ರಾಮಸ್ಥರು 12ಗಂಟೆಗೆ ವರೆಗೆ ಮತದಾನ ಮಾಡದೇ ಕುಳಿತಿದ್ದರು.

ನಂತರ ಮತದಾರರನ್ನು ಮನವೊಲಿಸುವುದಕ್ಕೆ ಅಧಿಕಾರಿಗಳು ಹರಸಾಹಸ ಪಟ್ಟರೂ ತಮ್ಮ ಪಟ್ಟನ್ನು ಊರವರು ಸಡಿಲಿಸಲಿಲ್ಲ.

ಕೊನೆಗೆ ಸಿಪಿಐ ಮತ್ತು ಪಿಎಸ್ಐ  ಸ್ಥಳಕ್ಕೆ ಭೇಟಿ ನೀಡಿ ಮನವೊಲಿಸಿ, ತಹಶೀಲ್ದಾರ್ ಅವರು ಫೋನ್ ಮೂಲಕ ಭರವಸೆ ನೀಡಿದ ನಂತರ 1 ಗಂಟೆಗೆ ಮತದಾನ ಮಾಡಲು ಮುಂದಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT