ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಲಾಕ್ಷಸ್ವಾಮಿಗೆ ‘ಪಕ್ಕೀರೇಶ್ವರ ಶ್ರೀ’ ಪ್ರಶಸ್ತಿ

Published : 9 ಸೆಪ್ಟೆಂಬರ್ 2024, 14:38 IST
Last Updated : 9 ಸೆಪ್ಟೆಂಬರ್ 2024, 14:38 IST
ಫಾಲೋ ಮಾಡಿ
Comments

ಹೂವಿನಹಡಗಲಿ: ತಾಲ್ಲೂಕಿನ ವಿನೋಬನಗರದ ಫಕೀರಯ್ಯ ಸ್ವಾಮಿ ಮಠದಲ್ಲಿ ಈಚೆಗೆ ಜರುಗಿದ ಧರ್ಮಸಭೆಯಲ್ಲಿ ಗುತ್ತಲದ ಪಾಲಾಕ್ಷ ಸ್ವಾಮಿ ನಿಜಗುಣಯ್ಯ ನೆಗಳೂರ ಮಠ ಅವರಿಗೆ ‘ಗುರು ಫಕೀರೇಶ್ವರ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಠದ ಧರ್ಮದರ್ಶಿ ಎಂ.ಪಿ.ಎಂ.ಕೊಟ್ರಯ್ಯ ಮಾತನಾಡಿ, ‘ವೈರಾಗ್ಯಮೂರ್ತಿ ಲಿಂ. ಫಕೀರಯ್ಯ ಸ್ವಾಮಿ ಅವರು ಈ ಭಾಗದಲ್ಲಿ ಪವಾಡಗಳನ್ನು ನಡೆಸಿ ಭಕ್ತರ ಹೃದಯದಲ್ಲಿ ನೆಲೆಸಿದ್ದಾರೆ. ಮಠದಿಂದ ಅವರ ಹೆಸರಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ಪ್ರೌಢಶಾಲೆ ಮುಖ್ಯ ಶಿಕ್ಷಕ ಸೂರ್ಯಕಾಂತ, ಪ್ರಶಸ್ತಿ ಪುರಸ್ಕೃತ ನೆಗಳೂರು ಮಠ ಮಾತನಾಡಿದರು. ಪಕ್ಕೀರೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ ವಿಶೇಷ ಪೂಜೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT