ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೂವಿನಹಡಗಲಿ | ನಟ ದರ್ಶನ್ ಚಿತ್ರಕ್ಕೆ ಪೂಜೆ: ಅರ್ಚಕ ಅಮಾನತು

Published 12 ಆಗಸ್ಟ್ 2024, 0:21 IST
Last Updated 12 ಆಗಸ್ಟ್ 2024, 0:21 IST
ಅಕ್ಷರ ಗಾತ್ರ

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಕುರುವತ್ತಿಯ ಐತಿಹಾಸಿಕ ಸುಕ್ಷೇತ್ರ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಟ ದರ್ಶನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಆರೋಪದ ಹಿನ್ನೆಲೆಯಲ್ಲಿ ಅರ್ಚಕ ಬಸಪ್ಪ ಪೂಜಾರ್ ಅವರನ್ನು ದೇವಸ್ಥಾನ ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ ಶಾಂತಮ್ಮ ಅಮಾನತುಗೊಳಿಸಿದ್ದಾರೆ.

ನಟ ದರ್ಶನ್ ಬಂಧಮುಕ್ತಗೊಳ್ಳಲಿ ಎಂದು ಪ್ರಾರ್ಥಿಸಿ ಜು.26 ರಂದು ಅಭಿಮಾನಿಗಳು ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಇದೇ ವೇಳೆ ಅಭಿಮಾನಿಗಳ ಕೋರಿಕೆ ಮೇರೆಗೆ ಅರ್ಚಕ ಬಸಪ್ಪ ಅವರು ಗರ್ಭಗುಡಿಯಲ್ಲಿರುವ ಪುರಾತನ ಬಸವಣ್ಣನ ವಿಗ್ರಹದ ಪಾದದಡಿ ದರ್ಶನ್ ಫೋಟೊ ಇರಿಸಿ ಪೂಜೆ ನೆರವೇರಿಸಿದ್ದರು. ಈ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ದೇವಸ್ಥಾನ ಸಮಿತಿಯಿಂದ ಆ.7 ರಂದು ಅರ್ಚಕರಿಗೆ ನೋಟಿಸ್ ಜಾರಿ ಮಾಡಲಾಗಿತ್ತು.‌

‘ಉದ್ದೇಶಪೂರ್ವಕವಾಗಿ ದೇವಸ್ಥಾನದ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದರಿಂದ ವಿಚಾರಣೆ ಕಾಯ್ದಿರಿಸಿ ಅರ್ಚಕರನ್ನು ಅಮಾನತುಗೊಳಿಸಲಾಗಿದೆ’ ಎಂದು ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT