ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ವಿವಿ: ಮತ್ತೆ ವಿದ್ಯುತ್ ಕಡಿತ ಭೀತಿ

Published 14 ಫೆಬ್ರುವರಿ 2024, 0:09 IST
Last Updated 14 ಫೆಬ್ರುವರಿ 2024, 0:09 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಹಂಪಿ ಕನ್ನಡ ವಿಶ್ವವಿದ್ಯಾಲಯದ ₹1.05 ಕೋಟಿ ವಿದ್ಯುತ್ ಬಿಲ್‌ ಬಾಕಿಯಿದೆ. ತಕ್ಷಣ ಪಾವತಿಸದಿದ್ದಲ್ಲಿ ವಿದ್ಯುತ್ ಪೂರೈಕೆ ಕಡಿತ ಮಾಡಲಾಗುವುದು’ ಎಂದು ಜೆಸ್ಕಾಂ ಮಂಗಳವಾರ ನೋಟಿಸ್ ನೀಡಿದೆ.

‘ಡಿಸೆಂಬರ್ ಕೊನೆ ವಾರದಲ್ಲೂ ಜೆಸ್ಕಾಂ ಇಂಥದ್ದೇ ನೋಟಿಸ್ ನೀಡಿತ್ತು. ಕುಲಸಚಿವರ ಕೈಗೆ ನೋಟಿಸ್‌ ತಲುಪಿದ ಮಾರನೇ ದಿನವೇ (ಡಿ.29) ಇಡೀ ದಿನ ವಿಶ್ವವಿದ್ಯಾಲಯ ಆವರಣದಲ್ಲಿ ವಿದ್ಯುತ್ ಪೂರೈಕೆ ಕಡಿತಗೊಳಿಸಲಾಗಿತ್ತು. ಫೆಬ್ರುವರಿಯಲ್ಲಿ ಅನುದಾನ ಬರುವ ನಿರೀಕ್ಷೆಯಿದ್ದು, ಘಟಿಕೋತ್ಸವವೂ ಇದೆ ಎಂದು ಹೇಳಿದ್ದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರು. ಆದರೆ, ಸರ್ಕಾರದಿಂದ ಇನ್ನೂ ಅನುದಾನ ಲಭ್ಯವಾಗಿಲ್ಲ. ಸರ್ಕಾರ ಮತ್ತು ಜೆಸ್ಕಾಂಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತೇವೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ವರ್ಷದ ಫೆಬ್ರುವರಿಯಲ್ಲೂ ₹1.05 ಕೋಟಿ ವಿದ್ಯುತ್ ಬಿಲ್ ಬಾಕಿ ಇತ್ತು. ಆಗಲೂ ವಿದ್ಯುತ್ ಕಡಿತವಾಗಿತ್ತು. ಆಗ ₹30 ಲಕ್ಷ ಹೊಂದಿಸಿ ಸ್ವಲ್ಪ ಬಿಲ್‌ ಪಾವತಿಸಲಾಗಿತ್ತು. ಸದ್ಯ ಪ್ರತಿ ತಿಂಗಳು ₹3.50 ಲಕ್ಷ ವಿದ್ಯುತ್ ಬಿಲ್‌ ಬರುತ್ತಿದ್ದು, ಬಾಕಿ ಮೊತ್ತ ಹೆಚ್ಚುತ್ತಲೇ ಇದೆ. 20 ದಿನದ ಹಿಂದೆ ವಿಶ್ವವಿದ್ಯಾಲಯಕ್ಕೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್‌ ಅವರು ವಾರದೊಳಗೆ ₹4 ಕೋಟಿ ಅನುದಾನ ಕೊಡಿಸುವುದಾಗಿ ಹೇಳಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT