ಸೋಮವಾರ, ಜೂನ್ 14, 2021
22 °C

‘ಪ್ರಜಾವಾಣಿ’ ವರದಿ ಫಲಶ್ರುತಿ: ಬಾಗಿಲು ತೆರೆದ ದಿನಸಿ ಮಳಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಪೊಲೀಸ್‌ ಇಲಾಖೆಯವರು ಕಿರಾಣ ಮರ್ಚಂಟ್‌ ಅಸೋಸಿಯೇಷನ್‌ನವರೊಂದಿಗೆ ಮಾತುಕತೆ ನಡೆಸಿ, ಅವರ ಮನವೊಲಿಸಿದ ಕಾರಣ ಬುಧವಾರ ನಗರದಲ್ಲಿ ದಿನಸಿ ಅಂಗಡಿಗಳು ಬಾಗಿಲು ತೆರೆದು ವಹಿವಾಟು ನಡೆಸಿದವು.

‘ತೆರೆಯದ ದಿನಸಿ ಮಳಿಗೆ; ಜನ ಪರದಾಟ’ ಶೀರ್ಷಿಕೆ ಅಡಿ ಬುಧವಾರ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಪೊಲೀಸರು ಅನಗತ್ಯವಾಗಿ ಕಿರಿಕಿರಿ ನೀಡಿ, ದಂಡ ಹಾಕುತ್ತಿರುವುದರಿಂದ ಕೋವಿಡ್‌–19 ನಿಷೇಧಾಜ್ಞೆ ಮುಗಿಯುವವರೆಗೆ ಮಳಿಗೆ ಬಾಗಿಲು ತೆರೆಯದಿರಲು ಕಿರಾಣ ಮರ್ಚಂಟ್‌ ಅಸೋಸಿಯೇಷನ್‌ನವರು ನಿರ್ಧರಿಸಿ, ಮಂಗಳವಾರ ನಗರದಲ್ಲಿ ಅಂಗಡಿಗಳನ್ನು ತೆರೆದಿರಲಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ಬಹಳ ತೊಂದರೆ ಉಂಟಾಗಿತ್ತು.

‘ಡಿವೈಎಸ್ಪಿ ವಿ. ರಘುಕುಮಾರ ಅವರು ನಮ್ಮ ಅಸೋಸಿಯೇಷನ್‌ನವರನ್ನು ಅವರ ಕಚೇರಿಗೆ ಕರೆಸಿಕೊಂಡು, ಪೊಲೀಸ್‌ ಇಲಾಖೆಯ ಯಾವುದೇ ಅಧಿಕಾರಿ, ಸಿಬ್ಬಂದಿಯಿಂದ ಕಿರುಕುಳ ಆಗದಂತೆ ಕ್ರಮ ವಹಿಸಲಾಗಿದೆ. ನಿಗದಿತ ಅವಧಿಯೊಳಗೆ ಅಂಗಡಿಗಳನ್ನು ತೆರೆದು ಸಾರ್ವಜನಿಕರಿಗೆ ಸೇವೆ ಒದಗಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಅವರ ಮನವಿಗೆ ಓಗೊಟ್ಟು ಬುಧವಾರ ಮಳಿಗೆಗಳನ್ನು ತೆರೆಯಲಾಗಿದೆ’ ಎಂದು ಅಸೋಸಿಯೇಷನ್‌ ಕಾರ್ಯದರ್ಶಿ ನಾಗರಾಜ ಮುಗದ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಮಳಿಗೆ ಮಾಲೀಕರಿಗೆ ಅನಗತ್ಯವಾಗಿ ಯಾರೂ ತೊಂದರೆ ಉಂಟು ಮಾಡಬಾರದು ಎಂದು ಅಧಿಕಾರಿ, ಸಿಬ್ಬಂದಿ ವರ್ಗಕ್ಕೆ ಸೂಚನೆ ಕೊಟ್ಟಿರುವೆ’ ಎಂದು ಡಿವೈಎಸ್ಪಿ ವಿ. ರಘುಕುಮಾರ ಪ್ರತಿಕ್ರಿಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು