ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡಾಯ ಕವಿ ಸಿದ್ಧಲಿಂಗಯ್ಯನವರಿಗೆ ಶ್ರದ್ಧಾಂಜಲಿ

Last Updated 14 ಜೂನ್ 2021, 14:31 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಬಂಡಾಯ ಕವಿಯೆಂದೇ ಜನಜನಿತರಾದ ಸಿದ್ಧಲಿಂಗಯ್ಯನವರಿಗೆ ಜಿಲ್ಲಾ ದಲಿತ ಸಂಘರ್ಷ ಸಮಿತಿಯಿಂದ (ಡಿ.ಜಿ. ಸಾಗರ ಬಣ) ಸೋಮವಾರ ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಂಘಟನೆಯ ಮುಖಂಡರು ಸಿದ್ಧಲಿಂಗಯ್ಯನವರ ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿದರೆ, ಕಲಾವಿದ ಯಲ್ಲಪ್ಪ ಭಂಡಾರದಾರ್‌ ಕ್ರಾಂತಿಗೀತೆಗಳನ್ನು ಹಾಡಿದರು.

‘ಕ್ರಾಂತಿಗೀತೆಗಳನ್ನು ರಚಿಸಿ ಆ ಮೂಲಕ ತಳಸಮುದಾಯದವರಲ್ಲಿ ಅಸ್ಮಿತೆಯ ಪ್ರಜ್ಞೆ ಮೂಡಿಸಿ, ಅವರಲ್ಲಿ ಹೋರಾಟದ ಕಿಚ್ಚು ಹಚ್ಚಿದವರು ಸಿದ್ಧಲಿಂಗಯ್ಯನವರು. ಅವರ ಅಗಲಿಕೆಯಿಂದ ತಳಸಮುದಾಯದವರಿಗೆ ದೊಡ್ಡ ನಷ್ಟ ಉಂಟಾಗಿದೆ’ ಎಂದು ಮುಖಂಡರು ಸ್ಮರಿಸಿದರು.

ಸಮಿತಿಯ ಜಿಲ್ಲಾಧ್ಯಕ್ಷ ಕಾರಿಗನೂರು ಲಕ್ಷಣ, ಮುಖಂಡರಾದ ಎಚ್.ಹುಲುಗಪ್ಪ, ವೈ.ಗೋವಿಂದರಾಜ, ಎ.ಬಸವರಾಜ, ಸಿ.ವೀರಭದ್ರಪ್ಪ, ಹನುಮಂತಪ್ಪ, ಎಚ್.ಎಸ್.ವೆಂಕಪ್ಪ, ಗುಜ್ಜಲ ನಾಗರಾಜ್, ನಿಂಬಗಲ್ ರಾಮಕೃಷ್ಣ, ಎಸ್.ಬಿ.ರಘುನಂದನ, ಸೋಮಶೇಖರ್ ಬಣ್ಣದಮನೆ, ಪರಮೇಶ್ವರಪ್ಪ, ನಾಗೇಂದ್ರ, ಸಂತೋಷ, ಓಬಳೇಶ್ ವಿನಾಯಕ ಶೆಟ್ಟರ್, ಈಶ್ವರ ಇಸೋಪ್, ಮಂಜುನಾಥ್ ಯಾದವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT