ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಳವಾದ 6 ಬೈಕ್ ವಶ–ಮೂವರ ಬಂಧನ

Published 26 ಮೇ 2024, 15:23 IST
Last Updated 26 ಮೇ 2024, 15:23 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಗರದ ವಿವಿಧ ಕಡೆಗಳಲ್ಲಿ ಕಳವಾದ ₹3.28 ಲಕ್ಷ ಮೌಲ್ಯದ ಆರು ಬೈಕ್‌ಗಳನ್ನು ವಶಪಡಿಸಿಕೊಂಡಿರುವ ಪಟ್ಟಣ ಠಾಣೆ ಪೊಲೀಸರು, ಮೂವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ತೋರಣಗಲ್‌ನ ಮೆಹಬೂಬ್ ಸುಭಾನಿ, ಬಳ್ಳಾರಿ ಕೌಲ್‌ಬಜಾರ್‌ನ ಪಿ.ಶೆಕ್ಷಾವಲಿ, ಸಂಡೂರು ತಾಲ್ಲೂಕು ತಾರಾನಗರದ ನಾಗರಾಜ ಸಿ.ಡಿ. ಎಂದು ಗುರುತಿಸಲಾಗಿದೆ.

ಭಾನುವಾರ ಬೆಳಿಗ್ಗೆ ಪಿಎಸ್‌ಐ ಶರಣಪ್ಪ ಕಟ್ಟಿಮನಿ ಮತ್ತು ಸಿಬ್ಬಂದಿ ಕನಕದಾಸ ವೃತ್ತದಲ್ಲಿ ಗಸ್ತಿನಲ್ಲಿದ್ದಾಗ ಒಂದು ಬೈಕ್‌ನಲ್ಲಿ ಇಬ್ಬರು ಅನುಮಾನಾಸ್ಪದವಾಗಿ ಸಾಗುತ್ತಿದ್ದುದು ಕಾಣಿಸಿತು. ಅವರನ್ನು ಹಿಡಿದು ವಿಚಾರಿಸಿದಾಗ ತಮ್ಮ ಬೈಕ್‌ ಕಳವು ಮಾಡಲಾದ ಬೈಕ್ ಎಂದು ಹೇಳಿ ತಮ್ಮ ತಪ್ಪನ್ನು ಒಪ್ಪಿಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರನ್ನೂ ಠಾಣೆಗೆ ಕರೆತಂದು ವಿಚಾರಿಸಿದಾಗ ತಾರಾನಗರದ ನಾಗರಾಜನಿಗೆ ಕಳವು ಮಾಡಲಾದ ಬೈಕ್‌ಗಳನ್ನು ಮಾರಾಟ ಮಾಡಿದ್ಡಾಗಿ ತಿಳಿಸಿದ್ದರು.

ತಂಡದ ಕಾರ್ಯವನ್ನು ಎಸ್‌ಪಿ ಶ್ರೀಹರಿಬಾಬು ಬಿ.ಎಲ್‌.ಶ್ಲಾಘಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT