ಸಿಂದಗಿ: ತಾಲ್ಲೂಕಿನ ಆಸಂಗಿಹಾಳ-ದೇವರನಾವದಗಿ-ಸೋಮಜಾಳ ಗ್ರಾಮಗಳ ಮಧ್ಯದಲ್ಲಿ ಕಳೆದ ಒಂದು ವಾರದಿಂದ ಚಿರತೆ ಓಡಾಡುತ್ತಿದೆ.
ಹೆಜ್ಜೆ ಗುರುತಿನಿಂದ ಚಿರತೆ ಎಂದು ಅರಣ್ಯಾಧಿಕಾರಿಗಳು ಖಚಿತಪಡಿಸಿದ್ದು, ಈಗಾಗಲೇ ಆಕಳು, ನಾಯಿಗಳನ್ನು ಮತ್ತು ಶನಿವಾರ ಸೋಮಜಾಳ ಗ್ರಾಮದ ಹದ್ದಿಯಲ್ಲಿನ ದೇವರನಾವದಗಿ ಗ್ರಾಮದ ರೈತ ಭೀಮರಾಯ ಗುರಣ್ಣ ಜನಿವಾರ ಎಂಬುವವರ ಕಬ್ಬಿನ ತೋಟದಲ್ಲಿ ಎಮ್ಮೆಯನ್ನು ಕೊಂದು ಹಾಕಿದೆ.
‘ಈಗಾಗಲೇ ಇದೇ ಭಾಗದಲ್ಲಿ ಚಿರತೆಯನ್ನು ಹಿಡಿಯಲು ಒಂದು ಬೋನ್ ಇಡಲಾಗಿದ್ದು, ಶನಿವಾರ ಮತ್ತೊಂದು ಬೋನ್ ಮುದ್ದೇಬಿಹಾಳದಿಂದ ತರಿಸಿ ಇಡಲಾಗಿದೆ. ಜೊತೆಗೆ ಡ್ರೋಣ ಕ್ಯಾಮೆರಾ ಬಳಕೆ ಮಾಡಲಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ರಾಜೀವ ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದರು.