ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ರಾಪ್ತೆ ಅತ್ಯಾಚಾರಿಗೆ 20 ವರ್ಷ ಜೈಲು

Last Updated 3 ಡಿಸೆಂಬರ್ 2022, 13:31 IST
ಅಕ್ಷರ ಗಾತ್ರ

ವಿಜಯಪುರ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ ಹಾಗೂ ₹ 20 ಸಾವಿರ ದಂಡ ವಿಧಿಸಿ ವಿಜಯಪುರ ಜಿಲ್ಲಾ ಸೆಷನ್ಸ್‌ ಕೋರ್ಟ್‌ನ ವಿಶೇಷ ಪೋಕ್ಸೊ ನ್ಯಾಯಾಲಯ ಶನಿವಾರ ತೀರ್ಪು ನೀಡಿದೆ.

ವಿಜಯಪುರದ ಗಾಂಧಿನಗರ ನಿವಾಸಿ ಸಂತೋಷ ಥಾವರು ರಾಠೋಡ (22) ಶಿಕ್ಷೆಗೊಳಗಾದ ಆರೋಪಿ.

2021 ಏಪ್ರಿಲ್‌ 2ರಂದು ರಂದು ವಿಜಯಪುರ ನಗರದ ಗಾಂಧಿನಗರ ಬಳಿ ದನ ಮೇಯಿಸುವಾಗ ಅಪ್ರಾಪ್ತೆಯ ಮೇಲೆ ಆರೋಪಿ ಅತ್ಯಾಚಾರ ಎಸೆಗಿದ್ದನು. ಈ ಕುರಿತು ವಿಜಯಪುರ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ಉತ್ತರ ಪ್ರದೇಶ ರಾಜ್ಯದ ಬದಾಯಿ ಜಿಲ್ಲೆಯ ಕೂಲಿಕಾರ್ಮಿಕ ಮಹಿಳೆ ಜೀವನೋಪಯಕ್ಕಾಗಿ ನಗರದ ಕೈಗಾರಿಕಾ ಪ್ರದೇಶದಲ್ಲಿ ಶೆಡ್‌ವೊಂದರಲ್ಲಿ ನೆಲೆಸಿದ್ದರು. ಇವರ 10 ವರ್ಷದ ಮಗಳು ದನ ಮೇಯಿಸುವಾಗ ಆರೋಪಿ ಅತ್ಯಾಚಾರ ಎಸಗಿದ್ದ.

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ವಿಶೇಷ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶ ರಾಮ ನಾಯಕ ಅವರು ಸಾಕ್ಷಿ, ಪುರಾವೆಗಳನ್ನು ಪರಿಶೀಲಿಸಿ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ವಿ.ಜಿ. ಹಗರಗುಂಡ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT