ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿಗೆ ಬಾಸಿಂಗ ಬಿಡಲು ಹೋಗಿ ಬಾಲಕ ನೀರು ಪಾಲು

Published 29 ಏಪ್ರಿಲ್ 2024, 15:40 IST
Last Updated 29 ಏಪ್ರಿಲ್ 2024, 15:40 IST
ಅಕ್ಷರ ಗಾತ್ರ

ವಿಜಯಪುರ: ಬಾಸಿಂಗ ಬಿಡಲು ನದಿಗೆ ಇಳಿದ ಬಾಲಕ ಆಕಸ್ಮಿಕವಾಗಿ ಕಾಲು ಜಾರಿ ನೀರು ಪಾಲಾದ ಘಟನೆ ನಿಡಗುಂದಿ ತಾಲ್ಲೂಕಿನ ಯಲಗೂರು ಗ್ರಾಮದ ಬಳಿ ಕೃಷ್ಣಾ ನದಿತೀರದಲ್ಲಿ ಸೋಮವಾರ ನಡೆದಿದೆ.

ಬಸವನಬಾಗೇವಾಡಿ ತಾಲ್ಲೂಕಿನ ಹಂಗರಗಿ ಗ್ರಾಮದ ವೆಂಕಟೇಶ ಶರಣಪ್ಪ ಚಲವಾದಿ(15) ಮೃತ ದುರ್ದೈವಿ.

ಮೃತ ಬಾಲಕನ ಚಿಕ್ಕಪ್ಪ ರವಿ ಅವರ ಮದುವೆ ಶುಕ್ರವಾರ ನಡೆದಿದ್ದು, ಸಂಪ್ರದಾಯದಂತೆ ನದಿಗೆ ಬಾಸಿಂಗ ಬಿಡಲು ಬಂಧುಗಳೊಂದಿಗೆ ನದಿತೀರಕ್ಕೆ ಬಂದಿದ್ದ.

ಬಸವನಬಾಗೇವಾಡಿಯ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ಶವದ ಹುಡುಕಾಟ ನಡೆಸಿದ್ದಾರೆ. ಸೋಮವಾರ ಆಲಮಟ್ಟಿ ಜಲಾಶಯದಿಂದ ನದಿ ಪಾತ್ರಕ್ಕೆ ನೀರು ಹರಿಸಿದ್ದರಿಂದ ನೀರು ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಸಂಜೆಯಾದರೂ ಶವ ಸಿಗಲಿಲ್ಲ.

ಹೀಗಾಗಿ ಮಂಗಳವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ನಡೆಯಲಿದೆ. ಸ್ಥಳಕ್ಕೆ ಪಿಎಸ್‌ಐ ಶಿವರಾಜ ಧರಿಗೋಣ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನದಿ ತೀರದಲ್ಲಿ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT