ಆಲಮಟ್ಟಿ: ಪ್ರವಾಸಿ ತಾಣ ಮತ್ತು ವಾಣಿಜ್ಯ ಕೇಂದ್ರ ಆಗಿರುವ ಆಲಮಟ್ಟಿ ರೈಲ್ವೆ ನಿಲ್ದಾಣ ಬಳಿ ಕೆಳಸೇತುವೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಲಮಟ್ಟಿ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಇತ್ತೀಚೆಗೆ ಮನವಿ ಸಲ್ಲಿಸಲಾಯಿತು.

ಹುಬ್ಬಳ್ಳಿಯಲ್ಲಿ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಮಾತನಾಡಿದ ಮುಖಂಡರು, ಆಲಮಟ್ಟಿಯಲ್ಲಿ ರೈಲ್ವೆ ನಿಲ್ದಾಣವು ಆಲಮಟ್ಟಿ ಪುನರ್ವಸತಿ ಕೇಂದ್ರ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆ ವಸಾಹತು ಕಟ್ಟಡಗಳ ಮಧ್ಯಭಾಗದಲ್ಲಿ ನಿರ್ಮಾಣವಾಗಿರುವುದರಿಂದ ಪುನರ್ವಸತಿ ಕೇಂದ್ರದ ನಿವಾಸಿಗಳು ಹಾಗೂ ನಿಡಗುಂದಿ, ಮುದ್ದೇಬಿಹಾಳ, ತಾಳಿಕೋಟೆ ತಾಲ್ಲೂಕಿನ ಬಹುತೇಕ ಪಟ್ಟಣ, ಗ್ರಾಮಗಳಿಂದ ಆಗಮಿಸುವ ಪ್ರಯಾಣಿಕರು ರೈಲ್ವೆ ನಿಲ್ದಾಣಕ್ಕೆ ಹೋಗಲು ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಪ್ಪಿಸಲು ಆಲಮಟ್ಟಿ ರೈಲ್ವೆ ನಿಲ್ದಾಣದ ಬಳಿ ಕೆಳಸೇತುವೆ ನಿರ್ಮಿಸಬೇಕೆಂದು ಮನವಿ ಮಾಡಿದರು.

ಅಖಂಡ ವಿಜಯಪುರ ಜಿಲ್ಲೆಯ ಜನತೆಗೆ ಅನುಕೂಲ ಕಲ್ಪಿಸಲು ವಿಜಯಪುರ- ವಾಸ್ಕೋ ಡಿ ಗಾಮಾ, ವಿಜಯಪುರ- ಗದಗ- ತಿರುಪತಿಗೆ ನೂತನ ರೈಲು ಪ್ರಾರಂಭಿಸಬೇಕು. ಹುಬ್ಬಳ್ಳಿ- ವಿಜಯಪುರ- ದೆಹಲಿ- ನಿಜಾಮುದ್ದೀನ್ ರೈಲನ್ನು ಆಲಮಟ್ಟಿಯಲ್ಲಿ ನಿಲುಗಡೆಗೊಳಿಸಬೇಕು. ಅಮೃತ ಭಾರತ ರೈಲು ಓಡಿಸಬೇಕು. ವಿಜಯಪುರ- ಆಲಮಟ್ಟಿ- ಬಾಗಲಕೋಟೆ- ಹುಬ್ಬಳ್ಳಿಗೆ ಇನ್ನೊಂದಿಷ್ಟು ಪ್ಯಾಸೆಂಜರ್ ರೈಲುಗಳನ್ನು ಓಡಿಸಬೇಕು. ದೂರದ ಸ್ಥಳಗಳಿಂದ ಆಗಮಿಸುವ ಪ್ರಯಾಣಿಕರಿಗೆ ಅತ್ಯಾಧುನಿಕ ಸೌಲಭ್ಯವುಳ್ಳ ಸುಸಜ್ಜಿತ ಡಾರ್ಮೆಂಟರಿ ನಿರ್ಮಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ವಿನಂತಿಸಿದರು.

ಮನವಿಯನ್ನು ರೈಲ್ವೆ ಪ್ರಧಾನ ವ್ಯವಸ್ಥಾಪಕರ ಪರವಾಗಿ ಸ್ವೀಕರಿಸಿ ಮಾತನಾಡಿದ ಕಾರ್ಯದರ್ಶಿ ಸುನೀಲ ಜಿ., ಈಗಾಗಲೇ ವಿಜಯಪುರ ಸಂಸದರು ಆಲಮಟ್ಟಿ ರೈಲ್ವೆ ನಿಲ್ದಾಣದ ಕುರಿತು ಪತ್ರ ವ್ಯವಹಾರ ಮಾಡಿದ್ದು, ರೈಲ್ವೆ ಇಲಾಖೆಯ ಮಂತ್ರಿಗಳೂ ಕೂಡ ಕೆಲ ಬೇಡಿಕೆಗಳ ಬಗ್ಗೆ ಕ್ರಮಕ್ಕೆ ಸೂಚಿಸಿದ್ದಾರೆ ಎಂದು ತಿಳಿಸಿದರು.

ಆಲಮಟ್ಟಿ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಭರತರಾಜ ದೇಸಾಯಿ, ಉಪಾಧ್ಯಕ್ಷರುಗಳಾದ ಶಿವಾನಂದ ಅವಟಿ, ಎನ್.ಎ.ಪಾಟೀಲ, ಸಂಘಟನಾಕಾರ್ಯದರ್ಶಿ ರಮೇಶ ಆಲಮಟ್ಟಿ, ಸಂಚಾಲಕ ಶಂಕರ ಜಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.