ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಾಂತಿ, ಕಾರುಣ್ಯದ ಗಣಿಯಾಗಿದ್ದ ತೋಂಟದ ಶ್ರೀ: ಡಾ.ರಮೇಶ ಕಲ್ಲನಗೌಡರ

Published 9 ಜುಲೈ 2023, 14:15 IST
Last Updated 9 ಜುಲೈ 2023, 14:15 IST
ಅಕ್ಷರ ಗಾತ್ರ

ಇಂಡಿ: ಮಠಗಳ ಮುಖ್ಯ ಕೆಲಸವೇ ವೈಚಾರಿಕತೆಯನ್ನು ಬಿತ್ತಿ ಬೆಳೆಯುವುದು ಎಂದು ಸಾರುತ್ತ ಪುಸ್ತಕ ಸ್ವಾಮಿಗಳಾಗಿ ನಾಡಿನಾದ್ಯಾಂತ ಮನೆ ಮಾತಾಗಿದ್ದವರು ಗದುಗಿನ ತೋಂಟದಾರ್ಯ ಡಾ. ಸಿದ್ದಲಿಂಗ ಶ್ರೀಗಳು ಎಂದು ಗದಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ರಮೇಶ ಕಲ್ಲನಗೌಡರ ಅಭಿಪ್ರಾಯಪಟ್ಟರು.

ಭೀಮಾಂತರಂಗ ಆನ್‌ಲೈನ್ ಸಾಹಿತ್ಯಕ ಸಾಂಸ್ಕೃತಿಕ ಜಗಲಿ ಕೇಂದ್ರವು ಅಯೋಜಿಸಿದ್ದ ಉಪನ್ಯಾಸ ಮಾಲಿಕೆ-2ರಲ್ಲಿಯ ಒಂಬತ್ತನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ನೆಲ–ಜಲ–ಭಾಷೆಗಾಗಿ ಹಗಲಿರುಳೂ ಶ್ರಮಿಸಿ ಮಠಗಳಿಗೆ ಹೊಸ ದಿಕ್ಕು ತೋರಿಸಿದವರು  ಸಿಧ್ಧಲಿಂಗ ಸ್ವಾಮೀಜಿ. ವಿಜಯಪುರ ಮೂಲದ ಶ್ರೀಗಳು ಬಸವಾದಿ ಶರಣರ ವಿಚಾರಗಳಿಗೆ ಅನುಗುಣವಾಗಿ ಬದುಕು ಕಟ್ಟಿಕೊಂಡವರು ಎಂದು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ನಾದ ಗ್ರಾಮದ ಪ್ರೌಢಶಾಲೆಯ ಮುಖ್ಯಗುರು ಸಿ.ಎಂ. ಬಂಡಗರ ಮಾತನಾಡಿ, ‘ಸ್ವಾಮಿಗಳ ನಡವಳಿಕೆಗಳಿಗೆ ಸಿದ್ದಲಿಂಗ ಶ್ರೀಗಳು ಹೊಸ ಭಾಷ್ಯ ಬರೆದವರು. ಅವರು ನಮ್ಮ ಸಿಂದಗಿ ತಾಲ್ಲೂಕಿನವರು ಅನ್ನುವುದು ಹೆಮ್ಮೆಯ ಸಂಗತಿ’ ಎಂದು ಹೇಳಿದರು.

ಪ್ರಮುಖ ಕಥೆಗಾರ ಸಿಂದಗಿಯ ಡಾ.ಚೆನ್ನಪ್ಪ ಕಟ್ಟಿ, ವಿಜಯಪುರದ ಕೆ.ಎ.ಎಸ್ ಅಧಿಕಾರಿ ಈರಣ್ಣ ಆಶಾಪುರ, ಶ್ರೀಧರ ಹಿಪ್ಪರಗಿ, ಸರೋಜಿನಿ ಮಾವಿನಮರ, ಅನಿತಾ ಅಳಗುಂಡಗಿ, ನಾಗರಾಜ ಮೇಟಿ, ಆಂಜನೇಯ ಹೊಸಮನಿ, ರಾಜಶೇಖರ ಮಾರನೂರ, ಮದರಷಾ ಮಕಂದಾರ, ಕಾಶೀನಾಥ ಬಂಡಗರ, ಶಿಕ್ಷಕ ಬಸವರಾಜ ಕಿರಣಗಿ, ಸಂತೋಷ ಬಂಡೆ, ವೈ.ಜಿ. ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT