ವಿಜಯಪುರ: ‘ಬಸವಾದಿ ಶರಣರು ಹಿಂದೂ ಧರ್ಮದ ಭಾಗವಾಗಿಯೇ ಇದ್ದವರು, ಬಸವಣ್ಣ ದಾರ್ಶನಿಕ ವ್ಯಕ್ತಿಯೇ ಹೊರತು ನಾಸ್ತಿಕ ಅಲ್ಲ. ಈ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ’ ಎಂದು ಕನೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ವಿಜಯಪುರ ಜಿಲ್ಲಾ ಪ್ರವೇಶ ನಿರ್ಬಂಧ ತೆರವಾದ ಎರಡು ವಾರಗಳ ಬಳಿಕ ಬಬಲೇಶ್ವರ ಪಟ್ಟಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ‘ಬಸವಾದಿ ಶರಣರ ಹಿಂದೂ ಸಮಾವೇಶ’ದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಬಸವಾದಿ ಪ್ರಮಥರನ್ನು ಕೆಲವರು ತಪ್ಪಾಗಿ ಅರ್ಥೈಸುತ್ತಿದ್ದಾರೆ. ಆದರೆ, ಎಲ್ಲ ವಚನಕಾರರ ಅಂಕಿತನಾಮ ಅವರ ಮನೆ ದೇವರೇ ಆಗಿವೆ. ಆ ದೇವರುಗಳೆಲ್ಲರೂ ಹಿಂದುಗಳ ಆರಾಧ್ಯ ದೇವರು’ ಎಂದು ಹೇಳಿದರು.

‘ಬಸವಣ್ಣ ದೇವಾಲಯ ಒಪ್ಪುವುದಿಲ್ಲ, ದೇವರನ್ನು ಒಪ್ಪುವುದಿಲ್ಲ, ವೇದ, ಉಪನಿಷತ್ ಒಪ್ಪುವುದಿಲ್ಲ ಎಂದು ಕೆಲವರು ಕೆಲ ವಚನಗಳನ್ನು ಉದಾಹರಿಸಿ ಪ್ರತಿಪಾದನೆ ಮಾಡುತ್ತಿದ್ದಾರೆ. ಆದರೆ, ಬಸವಣ್ಣ ರಚಿಸಿರುವ ಸುಮಾರು 72 ವಚನಗಳಲ್ಲಿ ಹಿಂದೂ ಧರ್ಮದ ದೇವರ ಬಗ್ಗೆ ಪ್ರಸ್ತಾಪಿಸಿದ್ದಾರೆ’ ಎಂದು ವಚನಗಳನ್ನು ಉದಾಹರಿಸಿದರು.

‘ಬಸವಣ್ಣ ತನ್ನ ವಚನಗಳಲ್ಲಿ ಕರ್ಮ ಸಿದ್ಧಾಂತ, ಮೋಕ್ಷ ಸಿದ್ಧಾಂತದ ಬಗ್ಗೆ ಪ್ರಸ್ತಾಪಿಸಿದ್ದಾರೆ. ವೇದವನ್ನು ಒಪ್ಪಿಕೊಂಡಿದ್ದಾರೆ. ಹಿಂದು ಸಮಾಜದ ಅಂಕುಡೊಂಕು ತಿದ್ದಿ ಶುದ್ಧವಾದ ಹಿಂದೂ ಸಮಾಜ ಕೊಟ್ಟವನು ಬಸವಣ್ಣ’ ಎಂದು ಹೇಳಿದರು.

‘ಕೆಲವರು ಕೆಲ ವಚನಗಳನ್ನು ಓದಿಕೊಂಡು ಜನರ ದಾರಿ ತಪ್ಪಿಸುತ್ತಿದ್ದಾರೆ, ಜನರನ್ನು ಭ್ರಮಿತರನ್ನಾಗಿಸುತ್ತಿದ್ದಾರೆ, ಜನರ ತಲೆ ಕೆಡಿಸುವ ಕೆಲಸ ಮಾಡುತ್ತಿದ್ದಾರೆ, ಪ್ರಾಸಂಗಿಕವಾಗಿ ಕೆಲ ವಚನಗಳ ಮೂಲಕ ಉಪದೇಶ ಮಾಡಿರುವುದನ್ನು ಸಾರ್ವತ್ರಿಕ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ವೀರಶೈವ ಲಿಂಗಾಯತ ಎರಡೂ ಒಂದೇ, ಬೇರೆಯಲ್ಲ. ವೀರಶೈವ ಲಿಂಗಾಯತರು ಹಿಂದುಗಳೇ. ಲಿಂಗಾಯತ ಹೊಸ ಧರ್ಮ ಕಟ್ಟುವುದಾದರೆ ತಾವು ಈಗಿರುವ ಮಠವನ್ನು ಬಿಟ್ಟು ಹೊಸಮಠಗಳನ್ನು ಕಟ್ಟಿ, ಕಾವಿಯನ್ನು ತೊರೆದು ಹೊಸ ಬಟ್ಟೆ ಹುಡುಕಿಕೊಳ್ಳಿ, ಹಿಂದೂ ಧರ್ಮದ ಭಾಗವಾಗಿರುವ ಲಿಂಗ, ಭಸ್ಮ, ರುದ್ರಾಕ್ಷಿ, ಪಠಿಸುವ ಮಂತ್ರಗಳನ್ನು ತೊರೆದು, ಹೊಸದನ್ನು ಹುಡುಕಿಕೊಳ್ಳಿ. ಇಲ್ಲವೇ, ನಿಮ್ಮ ಬುಡುಬುಡುಕೆ ಕೆಲಸ ಬಿಡಿ’ ಎಂದು ಪ್ರತ್ಯೇಕ ಧರ್ಮ ಪ್ರತಿಪಾದಕರಿಗೆ ಎಚ್ಚರಿಕೆ ನೀಡಿದರು.

‘ಬಬಲೇಶ್ವರದಲ್ಲಿ ಪ್ರಥಮವಾಗಿ ಆರಂಭಿಸಿರುವ ಬಸವಾದಿ ಶರಣರ ಹಿಂದೂ ಸಮಾವೇಶವನ್ನು ಮುಂದಿನ ದಿನಗಳಲ್ಲಿ ನಾಡಿನಾದ್ಯಂತ ಮಾಡುವುದಾಗಿ’ ಸ್ವಾಮೀಜಿ ಹೇಳಿದರು.

‘ಕರ್ನಾಟಕದ ಯೋಗಿ’ ಘೋಷಣೆ:

ಸಮಾವೇಶದಲ್ಲಿ ಕನೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರ ಕಟೌಟ್ಗಳು, ಫೋಟೊಗಳು ರಾರಾಜಿಸಿದವು. ಕರ್ನಾಟಕದ ಯೋಗಿ ಕನೇರಿ ಸ್ವಾಮೀಜಿ, ಜೈ ಶ್ರೀರಾಮ್, ಭಾರತ್ ಮಾತಾಕಿ ಜೈ ಎಂಬ ಘೋಷಣೆಗಳು ಮೊಳಗಿದವು. ಸಾವಿರಾರು ಭಕ್ತರು, ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.

ಅದ್ಧೂರಿ ಸ್ವಾಗತ:

ವಿಜಯಪುರದಿಂದ ಬಬಲೇಶ್ವರದ ವರೆಗೆ ಸಾವಿರಾರು ಯುವಕರು ಬೈಕ್ ರ್ಯಾಲಿ ನಡೆಸಿದರು. ಬಬಲೇಶ್ವರ ಪಟ್ಟಣದ ಶಾಂತವೀರ ವೃತ್ತದಿಂದ ಸಮಾವೇಶ ಆಯೋಜಿಸಲಾಗಿದ್ದ ಶಾರದಾ ಶಾಲೆಯ ಆವರಣದ ವರೆಗೆ ಎರಡು ಸಾವಿರಕ್ಕೂ ಅಧಿಕ ಮಹಿಳೆಯರು ಪೂರ್ಣಕುಂಭ ಮೆರವಣಿಗೆ ಮೂಲಕ ಕನೇರಿ ಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಮಠಾಧೀಶರನ್ನು ಸ್ವಾಗತಿಸಿದರು. ಭಕ್ತರು ಪುಪ್ಪವೃಷ್ಟಿಗೈದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.