ಸೋಲ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು 13 ವರ್ಷದ ಮಗಳು ಕಿಮ್ ಜು ಆಯೆ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಘೋಷಿಸಿದ್ದಾರೆ ಎಂದು ದಕ್ಷಿಣ ಕೊರಿಯಾದ ಗುಪ್ತಚರ ಸಂಸ್ಥೆಗಳು ತಿಳಿಸಿವೆ ಎಂದು ಬಿಬಿಸಿ ವರದಿ ಮಾಡಿದೆ.

ಮಗಳು ಕಿಮ್ ಜು ಇತ್ತೀಚಿನ ಚೀನಾ ಭೇಟಿ ಸೇರಿದಂತೆ ಕೆಲ ಉನ್ನತ ಕಾರ್ಯಕ್ರಮಗಳಲ್ಲಿ ತಂದೆ ಜೊತೆ ಕಾಣಿಸಿಕೊಂಡಿದ್ದರು. ಚೀನಾ ಭೇಟಿ ಕಿಮ್ ಮಗಳ ಮೊದಲ ವಿದೇಶ ಪ್ರವಾಸ ಆಗಿತ್ತು.

ಕಿಮ್ ಜೊತೆಗೆ ಮಗಳು ಅಧಿಕೃತ ಸಭೆಗಳಲ್ಲಿ ಭಾಗವಹಿಸುವುದೂ ಸೇರಿದಂತೆ ಹಲವು ವಿಚಾರಗಳ ಕುರಿತಂತೆ ದಕ್ಷಿಣ ಕೊರಿಯಾದ ರಾಷ್ಟ್ರೀಯ ಗುಪ್ತಚರ ಸೇವೆಯು(ಎನ್ಐಎಸ್) ಮಾಹಿತಿ ಕಲೆ ಹಾಕಿದೆ.

ಅಲ್ಲದೆ, ಈ ತಿಂಗಳ ಅಂತ್ಯದಲ್ಲಿ ನಡೆಯಲಿರುವ ಪಕ್ಷದ ಬೃಹತ್ ಸಮಾವೇಶದಲ್ಲಿ ಮಗಳು ಭಾಗವಹಿಸುತ್ತಾಳ ಎಂಬ ಬಗ್ಗೆ ಗಮನ ಇಟ್ಟಿರುವುದಾಗಿ ಎನ್ಐಎಸ್ ಹೇಳಿದೆ.

ಪಕ್ಷದ ಈ ಕಾರ್ಯಕ್ರಮದಲ್ಲಿ ವಿದೇಶಿ ನೀತಿ, ಯುದ್ಧ ಯೋಜನೆ ಮತ್ತು ಪರಮಾಣು ಕುರಿತಾದ ಯೋಜನೆಗಳಲ್ಲಿ ಮಗಳ ಪಾತ್ರದ ಬಗ್ಗೆ ಆ ಸಭೆಯಲ್ಲಿ ಮತ್ತಷ್ಟು ಮಾಹಿತಿ ಹೊರಬೀಳಲಿದೆ ಎಂದು ಅದು ಹೇಳಿದೆ.

ತಮ್ಮ ಉತ್ತರಾಧಿಕಾರಿ ಮಗಳು ಕಿಮ್ ಜು ಆಯೆಳಿಗೆ ಕಿಮ್ ತರಬೇತಿ ನೀಡುತ್ತಿದ್ದು, ಈಗ ನಿಯೋಜಿತ ಉತ್ತರಾಧಿಕಾರಿಯಾಗಿದ್ದಾರೆ ಎಂದು ದಕ್ಷಿಣ ಕೊರಿಯಾದ ಸಂಸದ ಲೀ ಸಿಯೋಗ್ ವೆನ್ ಹೇಳಿದ್ದಾರೆ.

ಕೊರಿಯಾ ಪೀಪಲ್ಸ್ ಆರ್ಮಿಯ ಸಂಸ್ಥಾಪನಾ ದಿನಾಚರಣೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಜು ಉಪಸ್ಥಿತಿ ಇತ್ತು. ಕುಮುಸಸನ್ ಪ್ಯಾಲೇಸ್ಗೆ ಭೇಟಿ ನೀಡಿದ್ದ ವೇಳೆ ಕೆಲ ನೀತಿ ನಿರೂಪಣೆಯಲ್ಲಿ ಮಗಳ ಧ್ವನಿ ಕೇಳಿಬಂದಿದೆ. ಹಾಗಾಗಿ, ಆಕೆ ನಿಯೋಜಿತ ಉತ್ತರಾಧಿಕಾರಿ ಹಂತದಲ್ಲಿದ್ದಾರೆ ಎಂದು ಎನ್ಎಎಸ್ ನಂಬಿದೆ ಎಂದು ಲೀ ಹೇಳಿದ್ದಾರೆ.

ಜು ಆಯೆ, ಕಿಮ್ ಅವರ ಒಬ್ಬಳೇ ಮಗಳಾಗಿದ್ದಾರೆ. ಕಿಮ್ಗೆ ಒಬ್ಬ ಮಗನೂ ಇರುವ ಬಗ್ಗೆ ಎನ್ಐಎಸ್ ಮಾಹಿತಿ ಕಲೆಹಾಕಿದ್ದು, ಯಾವುದೇ ಮಾಧ್ಯಮದಲ್ಲಿ ಅವನು ಕಾಣಿಸಿಕೊಂಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.