ಮಂಗಳವಾರ, ಆಗಸ್ಟ್ 3, 2021
24 °C

ವಿಜಯಪುರ: ಬೈಕ್‌, ಮೊಬೈಲ್‌ ಕಳ್ಳನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನಗರದಲ್ಲಿ ಬೈಕ್‌ ಮತ್ತು ಮೊಬೈಲ್‌ ಕಳವು ಮಾಡುತ್ತಿದ್ದ ಆರೋಪಿಯನ್ನು ಗ್ರಾಮೀಣ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಜಮಖಂಡಿ ನಿವಾಸಿ ಇಮ್ರಾನ್‌ ಮೆಹಬೂಬ ಕಾಟಿಕ್‌(28) ಬಂಧಿತ ಆರೋಪಿಯಾಗಿದ್ದಾನೆ. ಈತನು ಶನಿವಾರ ನಗರ ಸಮೀಪದ ಮಹಲ್‌ ಐನಾಪುರದ ಬಳಿ ಅಡ್ಡಾಡುತ್ತಿರುವಾಗ ಪೊಲೀಸರು ಅನುಮಾನ ಬಂದು ತಪಾಸಣೆ ನಡೆಸಿದಾಗ ಸಿಕ್ಕಿಬಿದ್ದಿದ್ದಾನೆ.

ಬಂಧಿತ ಆರೋಪಿಯಿಂದ ಸುಮಾರು ₹ 50 ಸಾವಿರ ಮೊತ್ತದ ವಿವಿಧ ಕಂಪನಿಗಳ ಒಟ್ಟು ನಾಲ್ಕು ಮೊಬೈಲ್‌ ಸೆಟ್‌ಗಳು ಹಾಗೂ ₹ 1ಲಕ್ಷ ಮೊತ್ತದ ಐದು ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ತಿಳಿಸಿದ್ದಾರೆ.

ಗ್ರಾಮೀಣ ವಿಭಾಗದ ಸಿಪಿಐ ಎಂ.ಕೆ.ದಾಮಣ್ಣವರ, ಪಿಎಸ್‌ಐ ಆನಂದ ಠಕ್ಕನ್ನವರ, ಆರ್‌.ಎ.ದಿನ್ನಿ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು