ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಳಿಕೋಟೆ: ಬಡ ವಿದ್ಯಾರ್ಥಿ ವೈದ್ಯಕೀಯ ಕನಸಿಗೆ ಬಲ ತುಂಬಿದ ಎಂ.ಬಿ.ಪಾಟೀಲ

ಪ್ರಜಾವಾಣಿ ವರದಿ ಪರಿಣಾಮ: ಎಂ.ಬಿ.ಪಾಟೀಲರಿಂದ ಶೈಕ್ಷಣಿಕ ನೆರವಿನ ಹಸ್ತ
Last Updated 9 ಫೆಬ್ರುವರಿ 2022, 12:12 IST
ಅಕ್ಷರ ಗಾತ್ರ

ತಾಳಿಕೋಟೆ: ‘ವೈದ್ಯನಾಗುವ ಕನಸಿಗೆ ಬಡತನ ಅಡ್ಡಿ’ ಶಿರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಫೆ.8 ರಂದು ಪ್ರಕಟವಾದ ವರದಿಗೆ ಸ್ಪಂದಿಸಿರುವ ಮಾಜಿ ಜಲಸಂಪನ್ಮೂಲ ಸಚಿವ ಹಾಗೂ ಬಿಎಲ್‌ಡಿಇ ಸಂಸ್ಥೆಯ ಅಧ್ಯಕ್ಷರೂ ಆದಶಾಸಕ ಎಂ.ಬಿ.ಪಾಟೀಲ ಅವರು ತಾಳಿಕೋಟೆ ತಾಲ್ಲೂಕಿನ ಗುಂಡಕನಾಳ ಗ್ರಾಮದ ಸತೀಶ ರಾಜೊಳ್ಳಿ ಅವರ ಸಂಪೂರ್ಣ ಶೈಕ್ಷಣಿಕ ವೆಚ್ಚ ಭರಿಸುವುದಾಗಿ ತಿಳಿಸಿದ್ದಾರೆ.

ಗೋವಾ ವಿಧಾನಸಭೆಯ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಅವರು ತಮ್ಮ ಬಿಡುವಿಲ್ಲದ ಪ್ರಚಾರ ಕಾರ್ಯದಲ್ಲೂ ‘ಪ್ರಜಾವಾಣಿ’ ಪತ್ರಿಕೆಯಲ್ಲಿನ ವರದಿಯನ್ನು ಗಮನಿಸಿ ತಕ್ಷಣವೇ ಈ ಸಂಬಂಧ ಕರೆ ಮಾಡಿ ಮಾತನಾಡಿದರು.

ವಿದ್ಯಾರ್ಥಿ ಸತೀಶನ ಕಾಲೇಜು ಶುಲ್ಕ, ವಸತಿ ಹಾಗೂ ಊಟ ಸೇರಿದಂತೆ ಪ್ರತಿ ವರ್ಷ ತಗಲುವ ಸುಮಾರು ₹ 1.25 ಲಕ್ಷ ಸಂಪೂರ್ಣ ವೆಚ್ಚವನ್ನು ತಮ್ಮ ಬಿ.ಎಲ್.ಡಿ.ಇ. ಸಂಸ್ಥೆಯ ಮೂಲಕ ಭರಿಸುವ ಭರವಸೆ ನೀಡಿದರು.

ಈ ಹಿಂದೆಯೂ ನೂರಾರು ಬಡ ವಿದ್ಯಾರ್ಥಿಗಳಿಗೆ, ಪ್ರತಿಭಾವಂತರ ವ್ಯಾಸಂಗಕ್ಕೆ ನೆರವಾಗಿರುವ ಅವರು ಇದೀಗ,ಸತೀಶನ ವೈದ್ಯಕೀ ಶಿಕ್ಷಣಕ್ಕೆ ಆಶ್ರಯ ನೀಡುವ ಮೂಲಕ ಜನಮೆಚ್ಚುಗೆಗೆ ಪಾತ್ರವಾಗಿದ್ದಾರೆ.

‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದ ವಿದ್ಯಾರ್ಥಿ ಸತೀಶ, ‘ಪ್ರಜಾವಾಣಿ’ ವರದಿಯಿಂದಾಗಿ ನನ್ನ ವೈದ್ಯಕೀಯ ಕನಸು ಈಡೇರುತ್ತಿದೆ. ಸಂಪೂರ್ಣ ವೆಚ್ಚದ ಭರವಸೆಯನ್ನು ಶಾಸಕ ಎಂ.ಬಿ.ಪಾಟೀಲ ಅವರು ನೀಡಿದ್ದು, ನಾಳೆಯೇ ವಿಜಯಪುರದಲ್ಲಿ ಹಣ ನೀಡುವುದಾಗಿ ತಿಳಿಸಿದ್ದು, ಪಾಲಕರೊಂದಿಗೆ ತೆರಳುವೆ ಎಂದರು.

ನನ್ನ ಕನಸು ನನಸಾಗಲು ಸಹಕರಿಸಿದ ಶಾಸಕರಿಗೂ ಮತ್ತು ಪ್ರಜಾವಾಣಿಗೂ ನಮನ ಸಲ್ಲಿಸುತ್ತೇವೆ. ಚೆನ್ನಾಗಿ ಓದಿ ವೈದ್ಯನಾಗಿ ಬಡಜನತೆಗೆ ನೆರವಾಗುವ ಮೂಲಕಈ ಋಣವನ್ನು ಮುಟ್ಟಿಸುವ ಪ್ರಯತ್ನ ಮಾಡುವೆ ಎಂದರು.

ವರದಿಗೆ ಸ್ಪಂದನೆ: ವಿಶೇಷ ವರದಿ ಓದಿಸಿದ ಅನೇಕರು ಕರೆ ಮಾಡಿ ಸಹಾಯ ಹಸ್ತ ಚಾಚಲು ಮುಂದೆ ಬರುತ್ತಿದ್ದಾರೆ. ಈಗಾಗಲೇ ನನಗೆ ಶಾಸಕ ಎಂ.ಬಿ.ಪಾಟೀಲ ಅವರಿಂದ ಸಂಪೂರ್ಣ ನೆರವಿನ ಭರವಸೆ ದೊರೆತ್ತಿದ್ದು, ಹೆಚ್ಚುವರಿ ಹಣ ದೊರೆತರೆ ಅದನ್ನು ನನ್ನಂತೆ ಇನ್ನೊಬ್ಬ ಬಡ ವಿದ್ಯಾರ್ಥಿಯಾಗಿರುವ ಅರುಣ ದೇವಶೆಟ್ಟಿಗೆ ಕೊಡುವೆ. ಅವನಿಗೂ ನೆರವಾಗಲು ಎಲ್ಲರನ್ನು ಕೋರುವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT