ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂದಗಿ: ‘ಸ್ವಾನುಭವ’ ವಚನ ಸಂಕಲನ ಬಿಡುಗಡೆ

Published 29 ಮಾರ್ಚ್ 2024, 14:37 IST
Last Updated 29 ಮಾರ್ಚ್ 2024, 14:37 IST
ಅಕ್ಷರ ಗಾತ್ರ

ಸಿಂದಗಿ: ಪಟ್ಟಣದ ಸಾರಂಗಮಠದಲ್ಲಿ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಸದ್ವಿಚಾರಗೋಷ್ಠಿ-328 ಕಾರ್ಯಕ್ರಮದಲ್ಲಿ ಮಹಾದೇವಿ ಹಿರೇಮಠ ರಚಿತ ಸ್ವಾನುಭವ ವಚನ ಸಂಕಲನ ಕೃತಿ ಬಿಡುಗಡೆ ಮಾಡಲಾಯಿತು.

ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಕೃತಿ ಬಿಡುಗಡೆ ಮಾಡಿದರು. ಕೊಟ್ಟೂರು-ಡೋಣೂರ ಕಟ್ಟಿಮನಿ ಹಿರೇಮಠದ ಪೀಠಾಧ್ಯಕ್ಷ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸ್ವಾನುಭವ ವಿಷಯದ ಕುರಿತು ಉಪನ್ಯಾಸ ನೀಡಿದರು.

ಲೇಖಕಿ ಮಹಾದೇವಿ ಹಿರೇಮಠ, ಪ್ರತಿಷ್ಠಾನದ ಸಂಚಾಲಕ ವಿ.ಡಿ.ವಸ್ತ್ರದ ಮಾತನಾಡಿದರು.

ಇದೇ ಸಂದರ್ಭದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ನೂತನ ಅಧ್ಯಕ್ಷ ಚನ್ನಪ್ಪ ಕಟ್ಟಿ, ಕರ್ನಾಟಕ ಜಾನಪದ ಅಕಾಡೆಮಿ ನೂತನ ಸದಸ್ಯ ಎಂ.ಎಂ.ಪಡಶೆಟ್ಟಿ ಹಾಗೂ ಲೇಖಕಿ ಮಹಾದೇವಿ ಹಿರೇಮಠ ಅವರನ್ನು ಪ್ರಭು ಸಾರಂಗದೇವ ಶಿವಾಚಾರ್ಯರು ಗೌರವಿಸಿದರು.

ಮಕ್ಕಳ ಸಾಹಿತಿ ಹ.ಮ.ಪೂಜಾರ ಮತ್ತು ವರ್ತಕ ಮಹಾದೇವಪ್ಪ ಮುಂಡೇವಾಡಗಿ ಅವರಿಂದ ಸಮಸ್ತ ಭಕ್ತರಿಗೆ ದಾಸೋಹ ಸೇವೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT