ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಡಗುಂದಿಯ ಚಪ್ಪರಬಂದ್ ಅಪರೂಪದ ಬಾಡಿ ಬಿಲ್ಡರ್

Last Updated 3 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ನಿಡಗುಂದಿ: ಅವರ ವಯಸ್ಸು 52. ಆದರೆ, ಅವರ ದೈಹಿಕ ಕಸರತ್ತು, ಮೈ ಉಬ್ಬಿಸಿದರೆ ಪ್ರದರ್ಶಿಸುವ ಅವರ ದೇಹಾಧಾರ್ಡ್ಯ ಎಂತಹ ಯುವಕರನ್ನು ನಾಚಿಸುತ್ತದೆ.

ಹೌದು, ಇಂತಹ ಅಪರೂಪದ ದೇಹಧಾರ್ಡ್ಯ ಹೊಂದಿ, ಈ ಮಧ್ಯ ವಯಸ್ಸಿನಲ್ಲಿಯೂ ನಿತ್ಯವೂ ಕಠಿಣ ವ್ಯಾಯಾಮ, ಕಠಿಣ ಆಹಾರ ಪದ್ಧತಿ ಅಳವಡಿಸಿಕೊಂಡು ದೇಹಧಾರ್ಡ್ಯ ಸ್ಪರ್ಧೆಯಲ್ಲಿ ಮುನ್ನಡೆಯುತ್ತಿರುವ ನಿಡಗುಂದಿಯ ಸಾಹೇಬ್ ಲಾಲ್ ಚಪ್ಪರಬಂದ್ ಅವರ ದೇಹವೈಖರಿ ನಿಜಕ್ಕೂ ಅಪರೂಪ.

ಈಚೆಗೆ ಬೆಳಗಾವಿಯಲ್ಲಿ ನಡೆದ ರಾಜ್ಯಮಟ್ಟದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಸಾಹೇಬ ಲಾಲ್ ಆಯ್ಕೆಯಾಗಿ, ಅಖಿಲ ಭಾರತ ಮಟ್ಟದ ದೇಹದಾರ್ಡ್ಯ ಸ್ಪರ್ಧೆಗೆ ಕರ್ನಾಟಕದ ವತಿಯಿಂದ ಭಾಗವಹಿಸಲು ಸಿದ್ಧತೆ ನಡೆಸುತ್ತಿದ್ದಾರೆ.

ಕೇಂದ್ರದ ಕ್ರೀಡಾ ಸಚಿವಾಲಯದ ಮಾನ್ಯತೆಯ ‘ಇಂಡಿಯನ್ ಬಾಡಿ ಬಿಲ್ಡರ್ ಫೆಡರೇಷನ್’ ಮಾರ್ಚ್ 4 ಮತ್ತು 5 ರಂದು ಮಧ್ಯಪ್ರದೇಶದಲ್ಲಿ ಏರ್ಪಡಿಸಿರುವ 13 ನೇ ಮಿಸ್ಟರ್ ಇಂಡಿಯಾ ಸ್ಪರ್ಧೆಯಲ್ಲಿ ಮಾಸ್ಟರ್ ವಿಭಾಗದಲ್ಲಿ ಸಾಹೇಬಲಾಲ್ ಸ್ಪರ್ಧಿಸಲಿದ್ದಾರೆ.

ಚಿಕ್ಕವರಿದ್ದಾಗಿನಿಂದಲೂ ದೈಹಿಕ ಕಸರತ್ತಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದ ಇವರು, ಯುವಕರಿದ್ದಾಗ, ಜಾತ್ರೆ, ಹಬ್ಬ ಹರಿದಿನಗಳಲ್ಲಿ ನಾನಾ ಕಡೆ ಏರ್ಪಡಿಸುತ್ತಿದ್ದ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರು. ಮುಂದೆ ಹೊಟ್ಟೆಪಾಡಿಗಾಗಿ ದುಬೈಗೆ ದುಡಿಯಲು ಹೋದರೂ ಅಲ್ಲಿಯೂ ದೈಹಿಕ ಕಸರತ್ತು ಮುಂದುವರೆಸಿದ್ದರು. ಅಲ್ಲಿಂದ ಬಂದು ನಿಡಗುಂದಿಯಲ್ಲಿ ಕಳೆದ 8 ವರ್ಷಗಳಿಂದ ಗೋಲ್ಡನ್ ಜಿಮ್ ತೆರೆದು ಯುವಕರಿಗೆ ತರಬೇತಿ ನೀಡುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ಖ್ಯಾತಿ ಪಡೆದಿರುವ ಬಾಡಿ ಬಿಲ್ಡರ್ ಚಂದ್ರಶೇಖರ ಪವಾರ ಅವರ ಪ್ರೇರಣೆಯಿಂದ ಕಳೆದ ಎರಡು ವರ್ಷಗಳಿಂದ ಇವರು ಬಾಡಿಬಿಲ್ಡಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಲು ಆರಂಭಿಸಿದ್ದಾರೆ.

ಅದರ ಫಲವಾಗಿ 70 ಕೆ.ಜಿ ವಿಭಾಗದಲ್ಲಿ ರಾಜ್ಯ ಹಾಗೂ ಮಹಾರಾಷ್ಟ್ರದ ನಾನಾ ಕಡೆ ನಡೆದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ನಾನಾ ಯುವಕರೊಂದಿಗೆ ಸ್ಪರ್ಧಿಸಿ ಇವರು ವಿಜೇತರಾಗಿದ್ದಾರೆ. ‘ಕರ್ನಾಟಕ ಅಸೋಷಿಯೇಷನ್ ಆಫ್ ಬಾಡಿ ಬಿಲ್ಡರ್ಸ್’ ವತಿಯಿಂದ ಆಯೋಜಿಸಿ ಸ್ಪರ್ಧೆಯಲ್ಲಿಯೂ ಅವರು ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT