ವಿಜಯಪುರ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ ಸದಸ್ಯರಾದ ಉಮೇಶ ಕೋಳಕೂರ, ಶಿವಯೋಗಪ್ಪ ನೇದಲಗಿ, ಶಿವಶರಣ ಭೈರಗೊಂಡ ಅವರ ಭಾವಚಿತ್ರವನ್ನುಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ದಹನ ಮಾಡಿ, ಪ್ರತಿಭಟನೆ ನಡೆಸಲಾಯಿತು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ರಾಜು ಆಲಗೂರ ಮಾತನಾಡಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಸುಜಾತ ಕಳ್ಳಿಮನಿ ಅವರ ಪರವಾಗಿ ಮತ ಚಲಾಯಿಸದೇ ಬಿಜೆಪಿ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿದ ಪಕ್ಷದ ಮೂರು ಜನ ಜಿಲ್ಲಾ ಪಂಚಾಯ್ತಿ ಸದಸ್ಯರ ಪಕ್ಷ ವಿರೋಧ ನಡೆಯನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದರು.

ಕೋವಿಡ್-19 ಟಾಸ್ಕ್ ಪೋರ್ಸ್ ಅಧ್ಯಕ್ಷ ಟಪಾಲ ಇಂಜಿನಿಯರ್, ಬಿಜೆಪಿಯು ಇಡೀ ದೇಶದಲ್ಲಿ ಹಣ ಹಾಗೂ ಅಧಿಕಾರದ ದಾಹದಿಂದ ವಾಮಮಾರ್ಗದ ಮೂಲಕ ಅಧಿಕಾರವನ್ನು ಪಡೆದಿದೆ. ಇದೇ ತಂತ್ರವನ್ನು ವಿಜಯಪುರ ಜಿಲ್ಲೆಯಲ್ಲಿ ಮಾಡಲು ಮುಂದಾಗಿತ್ತು. ಆದರೆ, ಕಾಂಗ್ರೆಸ್ ಪಕ್ಷದ ಸಮರ್ಥ ನಾಯಕರ ಪ್ರಯತ್ನದಿಂದ ಅದು ವಿಫಲವಾಯಿತು ಎಂದರು.

ಜಿಲ್ಲಾ ಪಂಚಾಯ್ತಿ ನೂತನ ಅಧ್ಯಕ್ಷೆ ಸುಜಾತ ಕಳ್ಳಿಮನಿ, ಮುಖಂಡರಾದ ಅಬ್ದುಲ್‌ಹಮೀದ್ ಮುಶ್ರೀಪ್, ಐ.ಎಂ.ಇಂಡಿಕರ, ವೈಜನಾಥ ಕರ್ಪೂರಮಠ, ಸೋಮನಾಥ ಕಳ್ಳಿಮನಿ, ಅಬ್ದುಲ್‌ಖಾದರ್, ಮಾತನಾಡಿದರು.

ಮುಖಂಡರಾದ ಚಾಂದಸಾಬ ಗಡಗಲಾವ, ಜಮೀರ್‌ಅಹ್ನದ್ ಬಕ್ಷಿ, ಆರತಿ ಶಹಾಪೂರ, ಜಮೀರ್ ಬಾಗಲಕೋಟ, ಡಾ.ಗಂಗಾಧರ ಸಂಬಣ್ಣಿ, ವಿಜಯಕುಮಾರ ಘಾಟಗೆ, ಸುರೇಶ ಘೋಣಸಗಿ, ವಸಂತ ಹೊನಮೊಡೆ, ಈರಪ್ಪ ಜಕ್ಕಣ್ಣವರ, ಸುಭಾಷ ಕಾಲೇಬಾಗ, ಫಯಾಜ ಕಲಾದಗಿ, ಜಯಶ್ರೀ ಭಾರತೆ, ರಾಜೇಶ್ವರಿ ಚೋಳಕೆ, ಆಸ್ಮಾ ಕಾಲೇಬಾಗ, ಅಲ್ಲಾಭಕ್ಷ ಬಾಗಲಕೋಟ, ಅಕ್ಬರ್ ನಾಯಕ್, ಅಜೀಂ ಇನಾಮದಾರ, ಇದ್ರೂಷ್ ಭಕ್ಷಿ, ಇಲಿಯಾಸ್ ಸಿದ್ದಿಕಿ, ಹಾಜಿಲಾಲ ದಳವಾಯಿ, ಚನ್ನಬಸಪ್ಪ ನಂದರಗಿ, ಹೈದರ್ ನದಾಪ್, ಸಚಿನ್ ಪಾಟೀಲ,ಅಜಾಜ್ ಕಲಾದಗಿ, ತಾಜುದ್ದೀನ ಖಲೀಪ, ಬಾಬು ಯಾಳವಾರ, ಎಂ.ಎ.ಬಕ್ಷಿ, ಅನಿಲಕುಮಾರ ಸುರಗಿಹಳ್ಳಿ, ಅಶ್ರಫ್ ಇಂಡಿಕರ, ಶಕೀಲ ಗಡೇದ, ಎ.ಬಿ.ಮುಲ್ಲಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.