ಶುಕ್ರವಾರ, ಆಗಸ್ಟ್ 19, 2022
22 °C

ವಿಜಯಪುರ: ನಾಡ ಪಿಸ್ತೂಲ್‌ ವಶಕ್ಕೆ, ಐವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಆಲಮೇಲ ಪಟ್ಟಣದ ಐಬಿ ಸಮೀಪ ಮೂರು ನಾಡ ಪಿಸ್ತೂಲ್‌ ಹಾಗೂ 10 ಜೀವಂತ ಗುಂಡುಗಳನ್ನು ಇಟ್ಟುಕೊಂಡು ಸುತ್ತಾಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಆಲಮೇಲದ  ಬಂದೇನವಾಜ್‌ ಸೌದಾಗರ(40), ಸಲೀಂ ತಾಂಬೋಳಿ(28), ಮಡಿವಾಳಪ್ಪ ಡೆಂಗಿ(23), ಅಶೋಕ ಪೂಜಾರಿ(38) ಹಾಗೂ ಮಲ್ಲಿಕಾರ್ಜುನ ದೇವರಮನಿ(40) ಬಂಧಿತ ಆರೋಪಿಗಳು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ತಿಳಿಸಿದ್ದಾರೆ.

ಪಿಸ್ತೂಲ್‌ ಮಾರಾಟ ಬಂಧನ: ವಿಜಯಪುರ ಗ್ರಾಮೀಣ ಠಾಣೆ ವ್ಯಾಪ್ತಿಯ ಹಂಚಿನಾಳ ತಾಂಡಾ ನಂ.1ರ ನಿವಾಸಿ ಕುಮಾರ ಜಾಧವ ಎಂಬಾತ ತನ್ನ ಮನೆಯಲ್ಲಿ ಅನಧಿಕೃತವಾಗಿ ನಾಡ ಪಿಸ್ತೂಲ್ ಮತ್ತು ಮೂರು ಜೀವಂತ ಗುಂಡುಗಳನ್ನು‌ ಇಟ್ಟುಕೊಂಡಿರುವುದನ್ನು ಪೊಲೀಸರು ಪತ್ತೆ ಹಚ್ಚಿ, ಆತನನ್ನು ಬಂಧಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು