‘ರಸ್ತೆ ಅಭಿವೃದ್ಧಿಗಾಗಿ ಆಲಮಟ್ಟಿ ರಸ್ತೆಯಲ್ಲಿ ಬೆಳೆದು ನಿಂತಿರುವ ಸುಮಾರು 30–40 ವರ್ಷದಷ್ಟು ಹಳೆಯದಾಗಿರುವ ಬೇವಿನ ಮರಗಳನ್ನು ತೆರವುಗೊಳಿಸಲಾಗುವುದು. ಅಂದಾಜು 80 ಮರಗಳನ್ನು ರಸ್ತೆಯ ಅಭಿವೃದ್ಧಿಗಾಗಿ ತೆರವು ಮಾಡಲಾಗುತ್ತದೆ’ ಎಂದು ಪಿಡಬ್ಲುಡಿ ಎಇಇ ಮಾಹಿತಿ ನೀಡಿದರು. ಈ ವೇಳೆ ಶಾಸಕರು ಮಧ್ಯಪ್ರವೇಶಿಸಿ ಈಗಿರುವ ಮರಗಳಿಗಿಂತ ಒಳ್ಳೆಯ ಗಿಡಗಳನ್ನು ನೆಡುವ ಕಾರ್ಯ ಮಾಡಬೇಕು ಎಂದು ಸೂಚಿಸಿದರು.