ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲಂಕೃತಗೊಂಡ ಆಲಮಟ್ಟಿ; ಕೃಷ್ಣೆಗೆ ಬಾಗಿನ ಇಂದು

Last Updated 29 ಸೆಪ್ಟೆಂಬರ್ 2022, 14:34 IST
ಅಕ್ಷರ ಗಾತ್ರ

ಆಲಮಟ್ಟಿ: ಆಲಮಟ್ಟಿ ಜಲಾಶಯದ ಹಿನ್ನೀರಿನ ಕೃಷ್ಣೆಯ ಜಲಧಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೆ.30ರಂದು ಬೆಳಿಗ್ಗೆ 10ಕ್ಕೆ ಬಾಗಿನ ಅರ್ಪಿಸಲಿದ್ದಾರೆ.

ಕಾರಣ ಆಲಮಟ್ಟಿಯ ನಾನಾ ವೃತ್ತಗಳು, ಜಲಾಶಯದ ದ್ವಾರ ಬಾಗಿಲು, ಬಾಗಿನ ಅರ್ಪಿಸುವ ಸ್ಥಳ ಹಾಗೂ ಸುತ್ತಲೂ ಹೂವು, ಗಿಡ, ಸಸ್ಯಗಳಿಂದ ಶೃಂಗರಿಸಲಾಗಿದೆ.

ಇಡೀ ದಿನ ನೂರಾರು ಕಾರ್ಮಿಕರು, ಅಧಿಕಾರಿಗಳು, ಅರಣ್ಯ ಇಲಾಖೆಯ ಕಾರ್ಮಿಕರು ಸ್ವಚ್ಛಗೊಳಿಸುವ, ಅಲಂಕರಿಸುವ ಕಾರ್ಯದಲ್ಲಿ ತೊಡಗಿದ್ದರು.

ಉದ್ಯಾನ ಬಂದ್ ಇಂದು:ಮುಂಜಾಗ್ರತೆಯ ಕ್ರಮವಾಗಿ ಆಲಮಟ್ಟಿಯಲ್ಲಿ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ. ಆಲಮಟ್ಟಿಯ ನಾನಾ ಉದ್ಯಾನಗಳು, ಅಂಗಡಿ ಮುಗ್ಗಟ್ಟುಗಳನ್ನು ಶುಕ್ರವಾರ ಮಧ್ಯಾಹ್ನದವರೆಗೆ ಬಂದ್ ಮಾಡಲಾಗುತ್ತಿದೆ. ಮಧ್ಯಾಹ್ನದ ನಂತರ ಉದ್ಯಾನಗಳು ಆರಂಭಗೊಳ್ಳಲಿವೆ ಎಂದು ಸೂಪರಿಂಟೆಂಡಿಂಗ್ ಎಂಜಿನಿಯರ್ ಡಿ. ಬಸವರಾಜ ತಿಳಿಸಿದರು.

ಮನವಿಗೆ ಅವಕಾಶವಿಲ್ಲ:ಮುಖ್ಯಮಂತ್ರಿಗಳು ಕೇವಲ ಒಂದು ಗಂಟೆ ಮಾತ್ರ ಆಲಮಟ್ಟಿಯಲ್ಲಿರಲಿದ್ದು, ಸಂಘ, ಸಂಸ್ಥೆ, ಸಾರ್ವಜನಿಕರು ಮನವಿ ಸಲ್ಲಿಸಲು ಆಲಮಟ್ಟಿಯಲ್ಲಿ ಅವಕಾಶವಿಲ್ಲ, ಮನವಿ ಸಲ್ಲಿಸುವವರಿಗೆ ವಿಜಯಪುರದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT