ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಕ್ಯಾಬ್ ಎಂಜಿನಿಯರಿಂಗ್ ಕಾಲೇಜಿಗೆ ಎಂಟು ರ‍್ಯಾಂಕ್ 

Last Updated 2 ಏಪ್ರಿಲ್ 2021, 11:29 IST
ಅಕ್ಷರ ಗಾತ್ರ

ವಿಜಯಪುರ: ಸಿಕ್ಯಾಬ್ ಎಂಜಿನಿಯರಿಂಗ್ ಕಾಲೇಜಿಗೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಎಂಟು ರ‍್ಯಾಂಕ್‌ ಹಾಗೂ ಒಂದು ಸುವರ್ಣ ಪದಕ ಬಂದಿರುವುದಾಗಿ ಸಿಕ್ಯಾಬ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಸ್. ಎ.ಪುಣೇಕರ ಹೇಳಿದರು.

ಸಿಕ್ಯಾಬ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕಾಲೇಜಿನ ಸಲ್ಮಾನ್ ಅಲಿ ಬಿ.ಇ. ಸಿವಿಲ್ ಎಂಜಿನಿಯರಿಂಗ್ ಅಂತಿಮ ವರ್ಷದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ನಾಲ್ಕನೇ ರ‍್ಯಾಂಕ್‌ ಗಳಿಸುವ ಮೂಲಕ ಕಾಲೇಜಿಗೆ ಕೀರ್ತಿ ತಂದಿರುವುದಾಗಿ ಹೇಳಿದರು.

ಕಾಲೇಜಿನ ಸ್ನಾತಕೋತ್ತರ (ಎಂ.ಟೆಕ್) ವಿಭಾಗ, ಕಂಪ್ಯೂಟರ್‌ ನೆಟ್‌ವರ್ಕ್‌ ‌ಎಂಜಿನಿಯರಿಂಗ್‌ನಲ್ಲಿ ಪ್ರಸಾದ್‌ ಮಾವರ್ಕರ್ ಸುವರ್ಣ ಪದಕದೊಂದಿಗೆ ಪ್ರಥಮ ರ‍್ಯಾಂಕ್‌, ರಶ್ಮಿ ವನಜಕರ ದ್ವಿತೀಯ, ಸಂಜೀವ ಕುಲ್ಲೂರ ತೃತೀಯ, ‌ ಅರ್ಸಿಯಾ ಮಣಿಯಾರ್‌ ನಾಲ್ಕನೇ ಹಾಗೂ ಉಮ್ಮೆ ಹಬೀಬಾ ಮ್ಯಾಗಿನಮನಿ ಐದನೇ ರ‍್ಯಾಂಕ್‌ ಪಡೆದಿದ್ದಾರೆ ಎಂದರು.

ಮೆಕ್ಯಾನಿಕಲ್ (ಎಂ.ಟೆಕ್) ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಾದ ಮಹಾದೇವ ಕಟ್ಟಿ ದ್ವಿತೀಯ, ಭರಮು ಬಣಜವಾಡ ತೃತೀಯ ರ‍್ಯಾಂಕ್‌ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ತಿಳಿಸಿದ್ದರು.

ಸಂಸ್ಥೆಯ ಕಾರ್ಯದರ್ಶಿ ಎ.ಎಸ್. ಪಾಟೀಲ, ಪದವಿ ಕಾಲೇಜಿನ ಆಡಳಿತ ಮಂಡಳಿಯ ಚೇರ್ಮನ್‌ ರಿಯಾಜ್ ಫಾರೂಖಿ, ನಿರ್ದೇಶಕ ಸಲಾವುದ್ದಿನ್ ಅಯೂಬಿ, ಎ.ಎಂ. ಬಗಲಿ ಹಾಗೂ ಉಪಪ್ರಾಚಾರ್ಯ ಪ್ರೊ.ವಸೀಮ್ ನಿಡಗುಂದಿ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ. ಎಸ್.ಜೆ. ಅರವೇಕರ, ಡಾ.ಸೈಯದ್ ನಿಯಮತುಲ್ಲಾ ಹುಸೇನ್, ಡಾ. ಸೈಯದ್ ಅಬ್ಬಾಸ್ ಅಲಿ, ಡಾ.ನೂರುಲ್ಲಾ ಶರೀಫ್, ಡಾ.ಶಿರಾಜ್ ಅಹ್ಮದ್, ಡಾ. ಅಜರಾ ಸುಲ್ತಾನಾ, ಪ್ರೊ.ಅಜರುದ್ದಿನ್ ಸಗರ, ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಮಹ್ಮದ ಅಫ್ಜಲ್ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ರ‍್ಯಾಂಕ್‌ ಹಾಗೂ ಚಿನ್ನದ ಪದಕ ವಿಜೇತ ವಿದ್ಯಾರ್ಥಿಗಳಾದ ಪ್ರಸಾದ ಮಾವರ್ಕರ್‌, ರಶ್ಮಿ ವನಜಕರ, ಉಮ್ಮೆ ಹಬೀಬಾ ಮ್ಯಾಗಿನಮನಿ, ಸಂಜೀವ ಕುಲ್ಲೂರು, ಮಹಾದೇವ ಕಟ್ಟಿ ಹಾಗೂ ಭರಮು ಬನಜವಾಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT