ಸೋಮವಾರ, ಡಿಸೆಂಬರ್ 6, 2021
25 °C

ವಿಜಯಪುರ: ಜೂಜಾಟ, ಮದ್ಯ ಮಾರಾಟ ತಡೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಐನಾಪೂರ ತಾಂಡದಲ್ಲಿ ಅಕ್ರಮ ಮದ್ಯ ಮಾರಾಟ, ಜೂಜಾಟ ತಡೆಯಲು ಆಗ್ರಹಿಸಿ ತಾಂಡಾ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಯಿತು.

ಗ್ರಾಮ ಪಂಚಾಯಿತಿ ಸದಸ್ಯೆ ಜಯಶ್ರೀ ಜಾಧವ ಮಾತನಾಡಿ, ತಾಂಡಾದಲ್ಲಿ ಹಲವಾರು ಜನ ಜೂಜಾಟ ಆಡುತ್ತಾರೆ. ದಿನೆದಿನೇ ಕಳ್ಳಭಟ್ಟಿ ಸಾರಾಯಿ ಮಾಡುತ್ತಿರುವವರ ಸಂಖ್ಯೆ ಹೆಚ್ಚಿದೆ. ಪ್ರಾಥಮಿಕ ಶಾಲೆ ಆವರಣದಲ್ಲಿ ಕುಳಿತುಕೊಂಡು ಕುಡಿಯುವುದು ಮತ್ತಿತರ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿದರು.

ಈ ಕುರಿತಂತೆ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದರೂ ಈವರೆಗೆ ಕ್ರಮಕೈಗೊಂಡಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ತಾಂಡಾ ಜನರ ನೆಮ್ಮದಿಗಾಗಿ ತಾಂಡಾದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ, ಜೂಜಾಟ ತಡೆಯಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾರಾಸಿಂಗ್ ನಾಯಕ, ವೀರಚಂದ ಪೂರಿ, ಚಂದು ಜಾಧವ, ಚಂದ್ರಶೇಖರ ರಾಠೋಡ, ಕಾಶೀನಾಥ ಚವ್ಹಾಣ, ಮೋತಿಲಾಲ್ ನಾಯಕ, ಸುಶೀಲಾಬಾಯಿ ಚವ್ಹಾಣ, ಸುಮಿತ್ರಾ ರಾಠೋಡ, ಗುರುಬಾಯಿ ರಾಠೋಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.