ಬುಧವಾರ, ಜೂನ್ 29, 2022
25 °C

ಗ್ರಾಪಂ ಉಪ ಚುನಾವಣೆ: ಶೇ 64.78ರಷ್ಟು ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ವಿವಿಧ ಕಾರಣಗಳಿಂದ ತೆರವಾಗಿದ್ದ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಶುಕ್ರವಾರ ಶಾಂತಿಯುತವಾಗಿ ಮತದಾನ ನಡೆಯಿತು.

ವಿಜಯಪುರ ತಾಲ್ಲೂಕಿನ ಹೆಗಡಿಹಾಳ ಗ್ರಾಮ ಪಂಚಾಯಿತಿಯ ಕತಕನಹಳ್ಳಿ, ಆಲಮೇಲ ತಾಲ್ಲೂಕಿನ ಕಡಣಿ ಗ್ರಾಮ ಪಂಚಾಯಿತಿಯ ತಾರಾಪುರ, ಸಿಂದಗಿ ತಾಲ್ಲೂಕಿನ ಗುಬ್ಬೆವಾಡ ಗ್ರಾಮ ಪಂಚಾಯಿತಿಯ ಬೋರಗಿ, ದೇವರ ಹಿಪ್ಪರಗಿ ತಾಲ್ಲೂಕಿನ ಹುಣಶ್ಯಾಳ ಗ್ರಾಮ ಪಂಚಾಯಿತಿಯ ಚಟ್ನಳ್ಳಿ ಮತ್ತು ಆನೆಮಡು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಿತು.

ಒಟ್ಟು ನಾಲ್ಕು ಸ್ಥಾನಗಳಿಗೆ ನಡೆದ ಗ್ರಾಮ ಪಂಚಾಯಿತಿ ಉಪ ಚುನಾವಣೆಯಲ್ಲಿ ಒಟ್ಟು 2250 ಪುರುಷರ ಪೈಕಿ 1454ರಷ್ಟು, ಒಟ್ಟು 2105 ಮಹಿಳೆಯರ ಪೈಕಿ 1367ರಷ್ಟು ಮತದಾರರು ತಮ್ಮ ಮತಹಕ್ಕನ್ನು ಚಲಾಯಿಸಿದ್ದಾರೆ.

ಬೆಳಿಗ್ಗೆ 7 ಕ್ಕೆ ಮತದಾನ ಆರಂಭಗೊಂಡಿತು. ಬೆಳಿಗ್ಗೆ 7ರಿಂದ 9 ರ ವರೆಗೆ ಶೇ 12.66ರಷ್ಟು, 11ರ ವರೆಗೆ ಶೇ 32.81ರಷ್ಟು, ಮಧ್ಯಾಹ್ನ 1ರ ವರೆಗೆ ಶೇ 46.51ರಷ್ಟು, ಮಧ್ಯಾಹ್ನ 3ರ ವರೆಗೆ ಶೇ 57.09ರಷ್ಟು ಮತ್ತು ಮತದಾನದ ಮುಕ್ತಾಯಗೊಂಡಾಗ ಶೇ 64.78ರಷ್ಟು ಮತದಾನವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.