ವಿಜಯಪುರ: ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ಮತ್ತು ಯುವ ಭಾರತ ಸಮಿತಿ ಸಹಯೋಗದಲ್ಲಿ ಗುರುವಾರ ವಿಜಯಪುರದ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಛಾಯಾಗ್ರಾಹಕರಿಗೆ ಆದಾಯ ತೆರಿಗೆ ಮತ್ತು ಜಿ.ಎಸ್.ಟಿ. ಕುರಿತು ವಿಶೇಷ ಕಾರ್ಯಾಗಾರ ನಡೆಯಿತು.
ಯುವ ಭಾರತ ಸಮಿತಿಯ ಅಧ್ಯಕ್ಷ ಉಮೇಶ ಕಾರಜೋಳ ಮಾತನಾಡಿ, ತೆರಿಗೆ ಮತ್ತು ಜಿ.ಎಸ್.ಟಿ. ಕುರಿತು ಛಾಯಾಗ್ರಾಹಕರಿಗೆ ಮಾಹಿತಿ ಕಾರ್ಯಾಗಾರ ಹಮ್ಮಿಕೊಂಡಿದ್ದು, ಅತ್ಯಂತ ಉಪಯುಕ್ತವಾಗಿದ್ದು, ಎಲ್ಲರಿಗೂ ಇದರ ಮಾಹಿತಿ ಪಡೆದುಕೊಳ್ಳಬೇಕು ಎಂದರು.
ವಿಜಯಪುರದ ಸರಕು ಮತ್ತು ಸೇವಾ ತೆರಿಗೆ ಇಲಾಖೆಯ ಸಿ.ಟಿ.ಓ. ಸುರೇಶ ಎಂ. ಗೊಳಸಂಗಿ ಇಲಾಖೆಯ ಸಂಪೂರ್ಣ ಮಾಹಿತಿ ನೀಡಿದರು.
ಲೆಕ್ಕ ಪರಿಶೋಧಕರಾದ ಶಾಂತವಿರೇಶ ಮಣೂರ ಮತ್ತು ಜಿಎಸ್‍ಟಿಪಿ ಸರಕುಗಳು ಮತ್ತು ಸೇವಾ ತೆರಿಗೆ ಸಲಹೆಗಾರರಾದ ಸಿದ್ದನಗೌಡ ಬಿರಾದಾರ ಅವರು ಲೆಕ್ಕ ಪತ್ರ ಮತ್ತು ಜಿ.ಎಸ್.ಟಿ. ಬಗ್ಗೆ ಮಾಹಿತಿ ನೀಡಿದರು.
ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ರಮೇಶ ಚವ್ಹಾಣ, ಪದಾಧಿಕಾರಿಗಳಾದ ಸಿದ್ದಪ್ಪ ಮಲ್ಲಪ್ಪ ಕುದರೆ, ಜಂಗಲಿಬಾಷಾ ಮುಜಾವರ, ಮೌನೇಶ ಬಡೆಗೇರ, ಸಂಗಯ್ಯ ಮಠಪತಿ, ಪಡೆಪ್ಪ ಕೋಲಕಾರ, ಯುವ ಭಾರತ ಸಮಿತಿಯ ಪದಾಧಿಕಾರಿ ವಿನೋದಕುಮಾರ ಮಣೂರ, ವಿರೇಶ ಗೊಬ್ಬುರ, ಕಲ್ಮೇಶ ಅಮರಾವತಿ, ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ಉಪಾಧ್ಯಕ್ಷ ಪ್ರಶಾಂತ ಪಟ್ಟಣಶೆಟ್ಟಿ, ಖಜಾಂಚಿ ಸುರೇಶ ರಾಠೋಡ, ನಿರ್ದೇಶಕ ರಾಜುಸಿಂಗ ರಜಪೂತ, ಗುರುಬಾಳಪ್ಪ ಗಲಗಲಿ, ಮಲ್ಲಿಕಾರ್ಜುನ ಪಾರ್ವತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.