ಇಂಡಿ: ಸಾವಯವ ಕೃಷಿಯಿಂದ ಸ್ವಾವಲಂಬನೆ ಮತ್ತು ಪರಿಸರ ಸಂರಕ್ಷಣೆಗೆ ದಾರಿ ತೋರಿದ ಅಪೂರ್ವ ಬದುಕು ಇಂಡಿ ತಾಲ್ಲೂಕಿನ ಸಾಲೋಟಗಿ ಗ್ರಾಮದ ರೈತ ಮಹಿಳೆ ಸವಿತಾ ಹಾಗೂ ಸೋಮಣ್ಣ ಕರೂರ ದಂಪತಿಯದ್ದು. ಸಾವಯವ ಕೃಷಿಯ ಮೂಲಕ ಮಣ್ಣಿಗೆ ಜೀವ ತುಂಬಿ, ಕೃಷಿಗೆ ಗೌರವ ತಂದು ಕೊಟ್ಟಿದ್ದಾರೆ.

‘ಬೆಳಿಗ್ಗೆ ಎದ್ದು ಯಾರ್ಯಾರ ನೆನೆಯಲಿ, ಎಳ್ಳು ಜೀರಿಗೆ ಬೆಳೆಯೋಳ ಭೂತಾಯಿ’ ಎಂಬ ತ್ರಿಪದಿಯ ತತ್ವವನ್ನು ಕೇವಲ ಮಾತಲ್ಲ, ಅದು ಬದುಕಿನ ಭಾಗವನ್ನಾಗಿಸಿಕೊಂಡಿರುವ ಕರೂರ ಅವರ ಕೃಷಿ ಜೀವನ ಇಂದಿನ ಅನೇಕ ರೈತರಿಗೆ ಪ್ರೇರಣೆಯಾಗಿದೆ.

ಇಂಡಿ ತಾಲ್ಲೂಕಿನ ಸಾಲೋಟಗಿ ಗ್ರಾಮದಿಂದ ಸುಮಾರು 3 ಕಿಲೋ ಮೀಟರ್ ದೂರದಲ್ಲಿರುವ 4 ಎಕರೆ ಜಮೀನಿನಲ್ಲಿ ಕಳೆದ 13 ವರ್ಷಗಳಿಂದ ದಂಪತಿ ಮನೆ ಮಾಡಿಕೊಂಡು ಆಡು, ಹಸುಗಳನ್ನು ಸಾಕಿಕೊಂಡು, ಅವುಗಳನ್ನು ಮನೆಯ ಸದಸ್ಯರಂತೆ ಜೋಪಾನವಾಗಿ ಸಾಕುತ್ತ ಸಂಪೂರ್ಣವಾಗಿ ಪ್ರಕೃತ್ತಿ ಸ್ನೇಹಿಯಾಗಿ ಸಾವಯವ ಕೃಷಿ ಪದ್ದತಿಯನ್ನು ಅನುಸರಿಸುತ್ತಿದ್ದಾರೆ.

‘ಮಣ್ಣು ಜೀವಂತವಾಗಿದ್ದರೆ, ಬೆಳೆ ತಾನಾಗಿಯೇ ನಗುತ್ತದೆ’ ಎಂಬ ದೃಢ ನಂಬಿಕೆಯಿಂದ ರಾಸಾಯನಿಕ ಗೊಬ್ಬರ ಹಾಗೂ ವಿಷಕಾರಿ ಔಷಧಿಗಳನ್ನು ದೂರವಿಟ್ಟು ಕೃಷಿ ಮಾಡುತ್ತಿದ್ದಾರೆ. ಕರೂರ ದಂಪತಿ ತೋಟ ಇಂದು ನಿಜಕ್ಕೂ ಸಾವಯವ ಗೊಬ್ಬರದ ಕಾರ್ಖಾನೆಯಾಗಿ ಮಾರ್ಪಟ್ಟಿದೆ.

ಜೀವಾಮೃತ, ಗಾಳಿರಹಿತ ಜೀವಾಮೃತ, ಕಂಪೋಸ್ಟ್, ಯರೆಹುಳು ಗೊಬ್ಬರ, ಆಡುಗಳ ಹಿಕ್ಕಿ, ದ್ರಾವಣ, ಪಂಚಗವ್ಯ, ದಸಗವ್ಯ, ಮೀನಾಮೃತ, ಗೋಕೃಪಾಮೃತ, ದಶಪರಡಿ, ಬಿಲ್ವರಸಾಯನ, ಬಯೋಚರ, ಬಾಳೆಹುವಿನಿಂದ ಸಿದ್ದಗೊಳಿಸಿದ ಪೋಟ್ಯಾಷ, ನಿಂಬೆ ಮೊಟ್ಟೆ ದ್ರಾವಣ, ಎರೆಝಲ, ತಾಂಬ್ರ ಹಾಕಿದ ಹುಳಿ ಮಜ್ಜಿಗೆ ಸೇರಿದಂತೆ ಅನೇಕ ಸಾವಯವ ದ್ರಾವಣಗಳನ್ನು ತಾವೇ ತಯಾರಿಸಿ, ಭೂಮಿಗೆ ಬಳಸುತ್ತಿದ್ದಾರೆ. ಇದರ ಫಲವಾಗಿ ಅವರ ಭೂಮಿ ಇಂದು ಅತ್ಯಂತ ಫಲವತ್ತತೆಯನ್ನು ಪಡೆದುಕೊಂಡಿದೆ.

ಏಳು ವರ್ಷದ ನಿಂಬೆ ತೋಟವು ನಳಿನಳಿಸುತ್ತಿದೆ. ಜೊತೆಗೆ ಕಬ್ಬು, ಬಾಳೆ, ತೆಂಗು ಹಾಗೂ ವಿವಿಧ ಹಣ್ಣಿನ ಗಿಡಗಳು ಸಮೃದ್ಧವಾಗಿ ಬೆಳೆದಿವೆ. ಮನೆ ಬಳಕೆಗೆ ತರಕಾರಿಗಳನ್ನು ಬಳಸಿ, ಹೆಚ್ಚುವರಿ ಉತ್ಪನ್ನವನ್ನು ಸ್ಥಳೀಯ ಸಂತೆಯಲ್ಲಿ ಮಾರಾಟ ಮಾಡುವ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಬದುವಿಗೆ ಬೇವಿನ ಮೇವಿನ ಬೆಳೆಗಳನ್ನು ಬೆಳೆಸಿ, ಪಶು ಸಂಗೋಪನೆಗೂ ಸಮರ್ಥ ಬೆಂಬಲ ನೀಡಿದ್ದಾರೆ. ಇವರ ಹೊಲಕ್ಕೆ ಭೇಟಿ ನೀಡಿದರೆ ಮೊದಲು ಗಮನ ಸೆಳೆಯುವುದು ಮಣ್ಣಿನ ಮೃದುತ್ವ. ಕೈಯಲ್ಲಿ ಮಣ್ಣನ್ನು ಹಿಡಿದರೆ ಜೀವಂತಿಕೆಯ ಅನುಭವ ಸಿಗುತ್ತದೆ. ಎಲ್ಲೆಂದರಲ್ಲಿ ಎರೆಹುಳಗಳ ಸಂಚಾರ ಕಂಡುಬರುತ್ತದೆ.

ಇಂದು ಅವರ ತೋಟ ಕೇವಲ ಉತ್ಪಾದನೆಯ ಕೇಂದ್ರವಲ್ಲ, ಅದು ಕೃಷಿಯ ಜ್ಞಾನ ಹಂಚುವ ಕೇಂದ್ರವಾಗಿ ರೂಪುಗೊಂಡಿದೆ. ಕೃಷಿ ಕಾಲೇಜಿನ ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡಿ ಸಾವಯವ ಕೃಷಿಯ ಸೂಕ್ಷ್ಮತೆಗಳನ್ನು ಕಲಿತು ದ್ರಾವಣಗಳನ್ನು ತಾವೇ ತಯಾರಿಸುವ ಪ್ರತ್ಯಕ್ಷ ಅನುಭವ ಪಡೆದುಕೊಳ್ಳುತ್ತಿದ್ದಾರೆ.

ಸಾವಯವ ಕೃಷಿಯಿಂದ ಆರ್ಥಿಕವಾಗಿ ಸ್ವಾವಲಂಬಿಗಳಾಗಿರುವ ಕರೂರ ದಂಪತಿ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವಲ್ಲಿಯೂ ಯಶಸ್ವಿಯಾಗಿದ್ದಾರೆ. ಹಿರಿಯ ಮಗ ಎಂಬಿಬಿಎಸ್, ಪುತ್ರಿ ಎಂಜಿನಿಯರಿಂಗ್ ಹಾಗೂ ಇನ್ನೊರ್ವ ಪುತ್ರಿ ಎಂಎಸ್ಸಿ (ಕೃಷಿ) ಓದಿದ್ದಾರೆ.

ಎಲೆಮರೆಯ ಕಾಯಿಯಂತೆ ಯಾವುದೇ ಆರ್ಭಟವಿಲ್ಲದೇ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಕರೂರ ಕಟುಂಬದ ಸಾಧನೆಯನ್ನು ಗುರುತಿಸಿ, ವಿವಿಧ ಸಂಘ ಸಂಸ್ಥೆಗಳು ಗೌರವಿಸಿವೆ. ಮೈಕ್ರೋಬಿ ಪೌಂಡೇಷನ್ ಯಲಹಂಕ (ಬೆಂಗಳೂರು) ವತಿಯಿಂದ 2022ರಲ್ಲಿ ಸಾವಯವ ಕೃಷಿ ರತ್ನ ಪ್ರಶಸ್ತಿ, ಪುಲಿಯನ್ ಸಾಮ್ರಾಜ್ಯ ಕನ್ನಡ ರಾಷ್ಟ್ರೀಯ ಪಾಕ್ಷಿಕ ಪತ್ರಿಕೆಯ ದಶಮಾನೋತ್ಸವ ಸಂಭ್ರಮದ ಸಂದರ್ಭದಲ್ಲಿ 2020ರಲ್ಲಿ ಹಸಿರು ಸೈನಿಕ ಪುರಸ್ಕಾರ, ಕೆಜಿಎಸ್ಎಸ್ವಿಎಸ್ ಶಿಕ್ಷಣ ಸಂಸ್ಥೆ ತಿಡಗುಂದಿ ವತಿಯಿಂದ 2025ರಲ್ಲಿ ಕೊಡ ಮಾಡುವ ಕೃಷಿ ಕಾಯಕ ಯೋಗಿ ರೈತ ಪ್ರಶಸ್ತಿ ಲಭಿಸಿವೆ.

ಪ್ರಕೃತಿಯೊಂದಿಗೆ ಸ್ನೇಹ ಬೆಳೆಸಿ ಮಣ್ಣನ್ನು ಮಾತೆಯಂತೆ ಕಾಣುವ ಕರೂರ ದಂಪತಿ ಸಾವಯವ ಕೃಷಿ ಇಂದು ರೈತರಿಗೆ ದಾರೀದೀಪವಾಗಿದೆ. ಲಾಭ, ಆರೋಗ್ಯ ಮತ್ತು ಪರಿಸರ ಸಂರಕ್ಷಣೆ ಈ ಮೂರನ್ನೂ ಒಂದೇ ಹೊಲದಲ್ಲಿ ಸಾಧಿಸಬಹುದೆಂಬ ಸಂದೇಶವನ್ನು ಸಾರಿದ್ದಾರೆ. ಸಂಪರ್ಕ ಸಂಖ್ಯೆ-9900856904.

ಎಲ್ಲರೂ ಒಂದೇ ಕಡೆ ತಿಪ್ಪೆ ಮಾಡುತ್ತಾರೆ. ಆದರೆ ನಾನು ನನ್ನ ಹೊಲದ ತುಂಬ ತಿಪ್ಪೆ ಮಾಡಿದ್ದೇನೆ. ಇದರಿಂದ ಬೆಳೆಗಳೆಲ್ಲ ಸಮೃದ್ಧವಾಗಿ ಬೆಳೆಯುತ್ತಿವೆ
ಸೋಮಣ್ಣ ಕರೂರ ಸಾವಯವ ಕೃಷಿಕ