ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗ, ಆಯುರ್ವೇದ ಕಲಿಕೆಗೆ ಜಪಾನ್‌ ಉತ್ತೇಜನ

ಜಪಾನ್‌ ರಾಯಭಾರ ಕಚೇರಿ ಡೆಪ್ಯೂಟಿ ಕೌನ್ಸಿಲ್ ಕಸ್ತುಮಸಾ ಮರಾವೂ
Last Updated 25 ಆಗಸ್ಟ್ 2021, 15:50 IST
ಅಕ್ಷರ ಗಾತ್ರ

ವಿಜಯಪುರ: ಭಾರತದ ಯೋಗ ಮತ್ತು ಆಯುರ್ವೇದ ವಿಶ್ವದ ಗಮನ ಸೆಳೆದಿದೆ.ಜಪಾನ್‌ ಪ್ರವಾಸಿಗರಿಗೆ ಕರ್ನಾಟಕ, ಕೇರಳದಲ್ಲಿ ಯೋಗ ಮತ್ತು ಆಯುರ್ವೇದ ಕಲಿಕೆಗೆ ಉತ್ತೇಜಿಸುವ ಯೋಚನೆಯಲ್ಲಿದೆ ಎಂದುಜಪಾನ್‌ ರಾಯಭಾರ ಕಚೇರಿ ಡೆಪ್ಯೂಟಿ ಕೌನ್ಸಿಲ್ ಕಸ್ತುಮಸಾ ಮರಾವೂ ಹೇಳಿದರು.

ಭಾರತ-ಜಪಾನ್‌ ರಾಜತಾಂತ್ರಿಕ ಸಂಬಂಧಗಳ 70ನೇ ಸ್ಥಾಪನಾ ದಿನಾಚರಣೆ ಅಂಗವಾಗಿಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರುಮಾತನಾಡಿದರು.

ಭಾರತ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಜಪಾನ್‌ ಕೂಡ ಪ್ರಜಾತಾಂತ್ರಿಕ ರಾಷ್ಟ್ರವಾಗಿದ್ದು, ಭಾರತದೊಂದಿಗಿನ ಮಧುರ ಬಾಂಧವ್ಯವನ್ನು ಸದಾ ಮುಂದುವರೆಸಲು ಬಯಸುತ್ತದೆ. ನಮ್ಮ ರಾಜತಾಂತ್ರಿಕ ಕಚೇರಿಯ ಮೂಲಕ ಸಾಂಸ್ಕೃತಿಕ ವಿನಿಯಮಯದ ಅಂಗವಾಗಿ ಸಂಸ್ಕೃತಿ, ಆಹಾರ, ಸಂಗೀತ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ನೀಡ ಬಯಸುತ್ತೇವೆ ಎಂದರು.

ಬಿ.ಎಲ್.ಡಿ.ಇ ಅಧ್ಯಕ್ಷ ಎಂ.ಬಿ.ಪಾಟೀಲ್ ಮಾತನಾಡಿ, ವಿಜಯಪುರ ಜಿಲ್ಲೆ ಸಾಂಸ್ಕೃತಿಕ ಹಿರಿಮೆ ಹೊಂದಿದ್ದು, ನಮ್ಮ ರೈತರು ಕೃಷಿ, ತೋಟಗಾರಿಕಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ವಿಜಯಪುರದಲ್ಲಿ ನಿರ್ಮಾಣವಾಗುತ್ತಿರುವ ನೂತನ ಫುಡ್‍ಪಾರ್ಕ್‍ನಲ್ಲಿ ಜಪಾನ್‌ ತಂತ್ರಾಜ್ಞಾನವನ್ನು ಪರಿಚಯಿಸುವುದು ಮತ್ತು ಜಪಾನ್‌ನಲ್ಲಿ ಬೆಳೆಯುವ ಉತ್ಕೃಷ್ಟ ದ್ರಾಕ್ಷಿ ಮತ್ತು ಮಾವು ತಳಿಗಳನ್ನು ನಮ್ಮ ಜಿಲ್ಲೆಗೆ ಪರಿಚಯಿಸಲು ರಾಯಬಾರಿ ಕಚೇರಿ ಮುಂದಾಗಬೇಕು ಎಂದು ಕೋರಿದರು.

ಜಗತ್ತಿನ ವಿವಿಧ ರಾಷ್ಟ್ರಗಳ ಪ್ರವಾಸಿಗರಿಗೆ ನಮ್ಮ ಭಾಗವನ್ನು ಪರಿಚಯಿಸಲು ತಮ್ಮ ತಂತ್ರಜ್ಞಾನ, ನೆರವು ಬೇಕು. ಜಗತ್ತಿನ ಪ್ರಮುಖ ಕಂಪನಿಗಳಾದ ಸೋನಿ, ಹಿಟಾಚಿ, ಪ್ಯಾನಾಸೋನಿಕ್ ತಮ್ಮ ಘಟಕಗಳನ್ನು ಸ್ಥಾಪಿಸಲು ಮುಂದೆ ಬರಬೇಕು ಎಂದರು.

ಕೃತಕ ಬುದ್ಧಿಮತ್ತೆ ಮುಂದಿನ 2-3 ದಶಕಗಳ ಕಾಲ ವಿಶ್ವದಲ್ಲಿ ಉನ್ನತ ಸ್ಥಾನದಲ್ಲಿ ಮುಂದುವರೆಯಲಿದೆ. ಜಪಾನ್‌ ಈ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಅದರ ನೆರವು ನಮ್ಮ ವೈದ್ಯಕೀಯ ಕಾಲೇಜಿಗೆ ಮತ್ತು ಇಲ್ಲಿನ ವೈದ್ಯರಿಗೆ ದೊರೆತರೆ ಇನ್ನು ಹೆಚ್ಚಿನ ಸೇವೆಯನ್ನು ನಮ್ಮ ಭಾಗದಲ್ಲಿ ಮಾಡಲು ಸಾಧ್ಯವಾಗುತ್ತದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

ಡಾ.ಕುಶಾಲ್‌ ದಾಸ್‌, ಡಾ.ಶೋಲ್ಮೋನ್ ಚೋಪಡೆ, ಡಾ.ವಿಜಯಲಕ್ಷ್ಮೀ ಹಾದಿಮನಿ, ಡಾ.ಸಯ್ಯದ್‌ ಇನಾಮದಾರ, ಡಾ.ಪ್ರಮೋದ ಬರಗಿ, ಡಾ.ಸಾಕ್ಷಿ ಭಾಟಿಯಾ ಸಂವಾದದಲ್ಲಿ ಭಾಗವಹಿಸಿದ್ದರು.

ಬಿ.ಎಲ್.ಡಿ.ಇ ಆವರಣದಲ್ಲಿ ₹ 6 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಕ್ರೀಡಾ ಸಂಕೀರ್ಣ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಜಿಮ್ ವ್ಯವಸ್ಥೆ, ಬ್ಯಾಸ್ಕೆಟ್ ಬಾಲ್, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ ಮತ್ತು ಈಜುಕೊಳ ಹೊಂದಿದೆ.

ಉಪಕುಲಪತಿ ಡಾ.ಆರ್.ಎಸ್.ಮುಧೋಳ, ಸಂಸ್ಥೆ ನಿರ್ದೇಶಕರಾದ ಸಂಗು ಸಜ್ಜನ, ಬಸನಗೌಡ ಎಂ.ಪಾಟೀಲ, ಡಾ.ಅರುಣ ಇನಾಮದಾರ, ಡಾ.ರಾಘವೇಂದ್ರ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT