‘ಯಾರೋ ಕಿಡಿಗೇಡಿಗಳು ಮೂರು ದಿನಗಳ ಹಿಂದೆ ಸುಳ್ಳು ಸುದ್ದಿ ಇರುವ ಆಡಿಯೊ ಹರಿಬಿಟ್ಟಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ಯಾವುದೇ ಅಧಿಕೃತತೆ ಇಲ್ಲ. ಹೀಗಾಗಿ ಯಾರೂ ಈ ಸಂಬಂಧ ದೂರು ನೀಡಿಲ್ಲ, ಏ.15ರಂದು ವಿಜಯಪುರ ಬಂದ್‌ಗೆ ಕರೆ ನೀಡಿಲ್ಲ ಎಂದು ಈಗಾಗಲೇ ಮುಸ್ಲಿಂ ಮುಖಂಡರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಇದು ಕಿಡಿಗೇಡಿಗಳ ಕೃತ್ಯವಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ‘ಪ್ರಜಾವಾಣಿ’ಗೆ ತಿಳಿಸಿದರು.