ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಾಂತಿ ಸಹನಾ ಮೂರ್ತಿ ಮಲ್ಲಮ್ಮ’

Last Updated 14 ಮೇ 2019, 11:32 IST
ಅಕ್ಷರ ಗಾತ್ರ

ವಿಜಯಪುರ: ‘ಭಕ್ತಿ, ಶಾಂತಿ, ಸಹನೆಯ ಸಾಕಾರ ಮೂರ್ತಿ ಶರಣೆ ಹೇಮರಡ್ಡಿ ಮಲ್ಲಮ್ಮ. ಈಕೆ ಸ್ತ್ರೀಕುಲದ ತಿಲಕ’ ಎಂದು ವಕೀಲ ದಾನೇಶ ಅವಟಿ ಹೇಳಿದರು.

ನಗರದ ದಿವಟಗೇರಿ ಗಲ್ಲಿಯ ಮಲ್ಲಿಕಾರ್ಜುನ ದೇವಸ್ಥಾನದ ಶಿವಾನುಭವ ಮಂಟಪದಲ್ಲಿ ರಾಷ್ಟ್ರೀಯ ಬಸವಸೇನೆ, ಅಕ್ಕನ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮ ಜಯಂತಿ ಹಾಗೂ ವಿಶ್ವ ತಾಯಂದಿರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ಸತ್ಯ, ಶುದ್ಧ ಕಾಯಕದಿಂದ ಸಂಸಾರದ ಬಹು ಸಾಗರದಲ್ಲಿಎಷ್ಟೇ ಕಷ್ಟಗಳು ಬಂದರೂ ಎದುರಿಸಿ, ದನಗಾಹಿಯಾಗಿ ಕಾಡು ಮೇಡಲ್ಲಿ ಅಲೆದು ಶಿವನನ್ನು ಸಾಕ್ಷಾತ್ಕರಿಸಿಕೊಂಡು ಮಹಾಸಾಧ್ವಿಎನಿಸಿಕೊಂಡರುತಾಯಿ ಮಲ್ಲಮ್ಮ’ ಎಂದು ಹೇಳಿದರು.

ನಿವೃತ್ತ ಪ್ರಾಚಾರ್ಯ ಕೆ.ಎಚ್.ಪತ್ತಾರ ಮಾತನಾಡಿ, ‘ಸ್ತ್ರೀಕುಲಕ್ಕೆ ಮಲ್ಲಮ್ಮಆದರ್ಶಪ್ರಾಯಳು.ಮಾತೃ ಹೃದಯಿ ವಿಷಯಲಂಪಟನಾಗಿದ್ದ, ದುಶ್ಚಟಗಳ ದಾಸನಾಗಿದ್ದ ಮೈದುನ ವೇಮನಿಗೆ ಆತ್ಮಜ್ಞಾನ ಮೂಡಿಸುವ ಮೂಲಕ ಮಹಾಜ್ಞಾನಿಯನ್ನಾಗಿ ಜಗಕ್ಕೆ ಕರುಣಿಸಿದಳು’ ಎಂದು ಹೇಳಿದರು.

ರಾಷ್ಟ್ರೀಯ ಬಸವಸೈನ್ಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಗೌಡ ಕಲ್ಲೂರ ಅಧ್ಯಕ್ಷತೆ ವಹಿಸಿದ್ದರು. ಅಕ್ಕನ ಬಳಗದ ಅಂಬವ್ವ ನಿಂಬಾಳ, ಮಹಾದೇವಿ ಪೂಜಾರಿ, ಬೌರವ್ವ ಕಪಾಲಿ, ಜಯಶ್ರೀ ಪೂಜಾರಿ, ಗೌರವ್ವ ಕೋರಿ, ದ್ರಾಕ್ಷಾಯಣಿ ಕಮ್ಮಾರ, ಗೌರಾಬಾಯಿ ಬಳ್ಳಾರಿ, ಯಮನಕ್ಕ ಕೋರಿ, ಶಿವಾನಂದ ಪೂಜಾರಿ, ಸಿದ್ದು ಭಾವಿಕಟ್ಟಿ, ಶಿವು ಭೂತನಾಳ ಇದ್ದರು. ಆನಂದ ಜಂಬಗಿ ನಿರೂಪಿಸಿದರು. ಭೀಮಾಶಂಕರ ಪತ್ತಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT