ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ತಾಯಿ, ಮಗನ ಕೊಲೆ ಪ್ರಕರಣ: ಆರೋಪಿಗಳ ಬಂಧನ 

Published 23 ಮಾರ್ಚ್ 2024, 15:43 IST
Last Updated 23 ಮಾರ್ಚ್ 2024, 15:43 IST
ಅಕ್ಷರ ಗಾತ್ರ

ವಿಜಯಪುರ: ನಗರದ ವಸತಿಗೃಹದಲ್ಲಿ 2023ರ ಮಾರ್ಚ್‌ನಲ್ಲಿ ನಡೆದಿದ್ದ ಮೈಸೂರಿನ ತಾಯಿ–ಮಗನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

‘ಮೈಸೂರಿನ ಉದಯಗಿರಿ ಪೊಲೀಸ್‌ ಠಾಣೆ ವ್ಯಾಪ್ತಿಯ ಜ್ಯೋತಿ ಡಿ.ಎಸ್‌ ಮತ್ತು ಆಕೆಯ ಮಗ ರೋಹನ್‌ ಎಂಬುವರು ಕೊಲೆಯಾದವರು. ವಿಜಯಪುರದದ ಸಾಯಿ ಪಾರ್ಕ್‌ ನಿವಾಸಿ ಸಾಗರ ಲಮಾಣಿ (29) ಮತ್ತು ಆತನ ಸ್ನೇಹಿತ ಲಕ್ಷ್ಮಿಕಾಂತ ಕುಂಬಾರ(29) ಕೊಲೆ ಆರೋಪಿಗಳು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಜ್ಯೋತಿ ಡಿ.ಎಸ್ ಮತ್ತು ಸಾಗರ ಲಮಾಣಿ ಇಬ್ಬರೂ ಫೇಸ್‌ಬುಕ್ ಮೂಲಕ ಪರಿಚಿತರಾಗಿದ್ದರು. ಆಕೆಯ ಮೇಲೆ ಅನುಮಾನಪಟ್ಟು ವಿಜಯಪುರಕ್ಕೆ ಕರೆಯಿಸಿಕೊಂಡು, ವಸತಿಗೃಹದಲ್ಲಿ ಉಳಿಸಿದ. ನಂತರ ಲಕ್ಷ್ಮಿಕಾಂತ ಜೊತೆ ಸೇರಿ ತಾಯಿ ಮತ್ತು ಮಗನ ಕತ್ತು ಹಿಸುಕಿ ಕೊಲೆ ಮಾಡಿದ. ಇಬ್ಬರ ಶವಗಳನ್ನು ಕಾರಿನಲ್ಲಿ ಒಯ್ದು ತಿಕೋಟಾ ತಾಲ್ಲೂಕಿನ ಸಿದ್ಧಾಪುರ ಗ್ರಾಮದ ಹೊಲವೊಂದರ ಬಾವಿಯಲ್ಲಿ ಎಸೆದು ಹೋಗಿದ್ದರು. ವರ್ಷದ ಬಳಿಕ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT