‘ಇಡೀ ಭಾರತ ಪ್ರದರ್ಶನ ನೋಡುವ ಖುಷಿ’
‘ಏಳೆಂಟು ವರ್ಷಗಳಿಂದ ಮೈಸೂರು ದಸರಾದಲ್ಲಿ ಭಾಗಿಯಾಗಲು ನಮ್ಮ ಭಾಗದ ಕಲಾವಿದರಿಗೆ ಅವಕಾಶ ಸಿಕ್ಕಿರಲಿಲ್ಲ. ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಜಿಲ್ಲಾಧಿಕಾರಿ ಕೆ.ಆನಂದ ಶಾಸಕರಾದ ಸಿ.ಎಸ್.ನಾಡಗೌಡ ಅವರ ಶಿಫಾರಸ್ಸಿನ ಮೇರೆಗೆ ನಮ್ಮ ಕಲಾ ತಂಡ ಜಂಬೂಸವಾರಿ ಮೆರವಣಿಗೆಗೆ ಆಯ್ಕೆಯಾಗಿದೆ. ಈ ಮೂಲಕ ಇಡೀ ದೇಶವೇ ನಮ್ಮ ಕಲಾ ತಂಡದ ಪ್ರದರ್ಶನ ನೋಡುವಂತಾಗುತ್ತದೆ’ ಸಂಘದ ಕಾರ್ಯದರ್ಶಿ ಎಂ.ಎಸ್.ಕನ್ನೂರು ಸಂತಸ ಹಂಚಿಕೊಂಡರು.