ನಾಲತವಾಡ: ಪಟ್ಟಣದಲ್ಲಿ ಮೊದಲಿನಿಂದಲೂ ಹಿಂದೂ-ಮುಸ್ಲಿಮರಲ್ಲಿ ಶಾಂತಿ ಸೌಹಾರ್ದ ನೆಲೆಸಿರುವುದು ಸಂತಸದ ವಿಷಯ. ಮುಂದೆಯೂ ಇದೇ ರೀತಿ ಹಬ್ಬಗಳನ್ನು ಆಚರಿಸಿ ಎಂದು ಮುದ್ದೇಬಿಹಾಳ ಪಿಎಸ್ಐ ಸಂಜಯ ತಿಪರೆಡ್ಡಿ ಹೇಳಿದರು.

ಸ್ಥಳೀಯ ಹೊರ ಪೋಲಿಸ್ ಠಾಣೆಯ ಗಾರ್ಡನ್ನಲ್ಲಿ ಆಯೋಜಿಸಿದ್ದ ಹೋಳಿ ಮತ್ತು ರಂಜಾನ್ ಹಬ್ಬದ ಪೂರ್ವಭಾವಿ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ಪಿಯು ಪರೀಕ್ಷೆ ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು, ಒತ್ತಾಯ ಪೂರ್ವಕವಾಗಿ ಯಾರಿಗೂ ಬಣ್ಣ ಹಚ್ಚಬಾರದು ಎಂದರು.

ಹೊರ ಪೋಲಿಸ್ ಠಾಣೆಯ ಹಣಮಂತ ಹೆಬ್ಬುಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣ್ಯರಾದ ಬಾಲಚಂದ್ರ ಗದಗಿನ, ಅಂಜುಮನ್ ಇಸ್ಲಾಂ ಕಮಿಟಿಯ ಅಧ್ಯಕ್ಷ ಲಾಳೇಮಶಾಖ ಅವಟಿ, ಡಿಎಸ್ಎಸ್ ಮುಖಂಡ ಮಂಜುನಾಥ ಕಟ್ಟಿಮನಿ, ಗುಂಡಪ್ಪ ಚಲವಾದಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಬಸವರಾಜ ಗಂಗನಗೌಡ್ರ ಗಡ್ಡಿ, ರುದ್ರಯ್ಯ ರೇವಣಕಿಮಠ, ಅಜಯ್ ಕೋಟಿಖಾನಿ, ಸುಬ್ಬಣ್ಣ ಗಡ್ಡಿ, ಶಿವಯ್ಯ ವಿರಕ್ತಮಠ, ಬಸವರಾಜ ಮಕಾಶಿ, ಅಶೋಕ ಗಣಿ, ಘಾಳಪೂಜಿ ಗ್ರಾಮದ ರವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.