ಇಲ್ಲಿಯ ಪುರಸಭೆ ಕಾರ್ಯಾಲಯದಲ್ಲಿ ಸೋಮವಾರ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ ಅವರು, 11ನೆಯ ವಾರ್ಡ್ ಮೂಲ ಸೌಲಭ್ಯಗಳ ಅಭಿವೃದ್ಧಿ ಕಾರ್ಯ ಮಾಡುವಂತೆ ಕಳೆದ ನಾಲ್ಕು ವರ್ಷಗಳಿಂದ ಕೇಳುತ್ತಲೇ ಬಂದಿದ್ದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. 2021 ರಿಂದ ಈ ವರೆಗೂ ಪುರಸಭೆ ಕಾರ್ಯಾಲಯದಲ್ಲಿ ಪ್ರತಿ ಮಾಸಿಕ ಜಮಾ-ಖರ್ಚಿನ ಮಾಹಿತಿ ಮತ್ತು 11ನೆಯ ವಾರ್ಡ್‌ಗೆ ಮಾಡಲಾಗಿರುವ ಒಟ್ಟು ಖರ್ಚಿನ ವಿವರ ನೀಡುವಂತೆ ಸಾಕಷ್ಟು ಬಾರಿ ಲಿಖಿತವಾಗಿ ಕೇಳಿಕೊಂಡಿದ್ದರೂ ವಿವರ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.