ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕ ಪಕ್ಷ, ಏಕ ನಾಯಕತ್ವ ದೇಶಕ್ಕೆ ಅಪಾಯಕಾರಿ: ಶಾಸಕ ಕೆ. ಆರ್. ರಮೇಶಕುಮಾರ್

Last Updated 28 ಜುಲೈ 2022, 16:04 IST
ಅಕ್ಷರ ಗಾತ್ರ

ವಿಜಯಪುರ: ಬಹುತ್ವ ವಿರೋಧ ಮಾಡಿ ಒಂದೇ ಸಂಸ್ಕೃತಿ, ಒಂದೇ ಉಡುಗೆ, ಒಂದೇ ಭಾಷೆ, ಒಂದೇ ಪಕ್ಷ,ಒಂದೇ ನಾಯಕತ್ವ ಎಂದು ಪ್ರತಿಪಾದನೆ ಮಾಡುವವರನ್ನು ವಿರೋಧಿಸುವುದು ಈ ಘಳಿಗೆಯ ಅವಶ್ಯಕತೆಯಾಗಿದೆ ಎಂದು ಶಾಸಕ ಕೆ. ಆರ್. ರಮೇಶಕುಮಾರ್ ಹೇಳಿದರು.

ನಗರದಲ್ಲಿ ರಾಷ್ಟ್ರೀಯ ಸೌಹಾರ್ದ ವೇದಿಕೆ ನೇತೃತ್ವದಲ್ಲಿ ಬುಧವಾರ ಪ್ರಸಕ್ತ ವಿದ್ಯಮಾನಗಳ ಕುರಿತು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಹುತ್ವವನ್ನು ಒಳಗೊಂಡ ಬಹು ಸಂಸ್ಕೃತಿ, ಬಹು ಭಾಷ ಭಾರತದ ಸಾರ್ವಭೌಮತ್ವವನ್ನು ಉಳಿಸುವ ಪ್ರಜಾತಾಂತ್ರಿಕ ಹೋರಾಟ ಕಟ್ಟಲು ಶೋಷಿತ ವರ್ಗ ವೈಚಾರಿಕವಾಗಿ ಸದೃಢರಾಗಬೇಕಾಗಿದೆ ಎಂದರು.

ಬ್ರಿಟಿಷರೊಂದಿಗೆ ರಾಜಿ ಮಾಡಿಕೊಂಡು ಸ್ವಾತಂತ್ರ್ಯ ಸಂಗ್ರಾಮಕ್ಕೆ ದ್ರೋಹ ಬಗೆದಿರುವರು ಇಂದು ಅಧಿಕಾರದಲ್ಲಿದ್ದಾರೆ. ಅವರೇ ಇಂದು ದೇಶಪ್ರೇಮ, ರಾಷ್ಟ್ರಪ್ರೇಮದ ಕುರಿತು ಮಾತನಾಡುತ್ತಿರುವುದು ವಿಪರ್ಯಾಸ ಎಂದರು.

ದೇಶದ ಸ್ವಾತಂತ್ರ್ಯಕ್ಕಾಗಿ ಭಗತ್ ಸಿಂಗ್, ನೇತಾಜಿ ಸುಭಾಷ್‌ ಚಂದ್ರ ಬೋಸ್, ಇನ್ನುಳಿದ ಕ್ರಾಂತಿಕಾರಿಗಳು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಇದೇ ರೀತಿ ಸಾವಿರಾರು ಜನ ಇಡೀ ದೇಶದ ಸ್ವಾತಂತ್ರ್ಯಕ್ಕೋಸ್ಕರ ಪ್ರಾಣ ತ್ಯಾಗ ಮಾಡಿದ ಪರಿಣಾಮವಾಗಿ ಸ್ವತಂತ್ರರಾಗಿದ್ದೇವೆ. ಆದರೆ, ಇಂದು ಅಧಿಕಾರದಲ್ಲಿರುವವರು ಯಾವೊಬ್ಬ ನಾಯಕರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಲಿಲ್ಲ ಮತ್ತು ಪ್ರಾಣ ತೆತ್ತಲಿಲ್ಲ. ಪರ್ಯಾಯವಾಗಿ ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಕೊಲೆಗೈದರು. ಕೊಲೆಗೈದವನನ್ನು ಇಂದು ರಾಷ್ಟ್ರಭಕ್ತ, ದೇಶಭಕ್ತ ಎಂದು ಕೊಂಡಾಡುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.

ಡಾ.ಜಿ ಎಸ್ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಷ್ಟ್ರೀಯ ಸೌಹಾರ್ದ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಘಂಟೆಪ್ಪಗೋಳ, ಮೋಹನ ಹಿಪ್ಪರಗಿ, ರಾಜೇಶ್ವರಿ ಹಿಪ್ಪರಗಿ, ಫಯಾಜ್ ಕಲಾದಗಿ, ರವೀಂದ್ರ ಹಳಿಂಗಳಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT