ಇಂಡಿ: ಲವ್ ಜಿಹಾದ್ ತಡೆಯುವಂತೆ ಒತ್ತಾಯಿಸಿ ಬಂಜಾರ ಸಮಾಜ, ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ವಿವಿಧ ಹಿಂದೂ ಪರ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟಿಸಿ, ಡಿವೈಎಸ್ಪಿ ಸದಾಶಿವ ಕಟ್ಟಿಮನಿ ಅವರಿಗೆ ಮನವಿ ಸಲ್ಲಿಸಿದರು.

ಮಂಚಾಲೇಶ್ವರಿ ತೊನಶ್ಯಾಳ ಮಾತನಾಡಿ, ನಗರದ ಕೇಸರಾಳ ತಾಂಡಾದ ಯುವತಿಗೆ ವಿಜಯಪುರದಲ್ಲಿ ಕಾಲೇಜಿನಲ್ಲಿ ಕಲೆಯುತ್ತಿದ್ದು, ಅವಳಿಗೆ ಮಹಮ್ಮದ್ ತಂದೆ ಸಲೀಂ ಸುತಾರ ಹಾಗೂ ನಾಲ್ಕೈದು ಜನ ಕೂಡಿಕೊಂಡು ಕಾನೂನು ಬಾಹಿರವಾಗಿ ಅನಧಿಕೃತವಾಗಿ ಮದುವೆ ಮಾಡಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಕಾನೂನು ಬಾಹಿರವಾಗಿ ವಿವಾಹ ಮಾಡಿಕೊಂಡು, ಆ ಹುಡುಗಿಗೆ ಲವ್ ಜಿಹಾದ್ ಮಾಡಿದ್ದಾರೆ. ಇಂತಹ ಬಹಳಷ್ಟು ಪ್ರಕರಣಗಳು ನಡೆಯುತ್ತಿದ್ದು, ಅನೇಕ ಮಹಿಳೆಯರು ಮೊದಲು ಮುಸ್ಲಿಂ ಯುವಕರೊಂದಿಗೆ ಕಾನೂನುಬಾಹಿರವಾಗಿ ವಿವಾಹವಾಗಿ ನಂತರ ಕೆಲವೇ ದಿನಗಳಲ್ಲಿ ಅಂತಹ ಮಹಿಳೆಯರು ಬೀದಿ ಬದಿಯಲ್ಲಿ ಬಿಟ್ಟು ಹೋಗುವಂತಹ ಪ್ರಕರಣಗಳು ನಮ್ಮ ಕಣ್ಣ ಮುಂದೆ ಸಾಕಷ್ಟು ಆಗಿವೆ ಎಂದರು.

ಇದು ಲವ್ ಜಿಹಾದ್ ಆಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಹೀಗಾಗಿ ಕೂಡಲೇ ಮದುವೆ ಮಾಡಿಕೊಂಡ ಯುವಕ ಹಾಗೂ ಆತನ ಜೊತೆಗಿದ್ದ ನಾಲ್ವರನ್ನು ಕರೆಯಿಸಿ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಎಲ್ಲ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾಸೂಗೌಡ ಬಿರಾದಾರ, ಯಮನಾಜಿ ಸಾಳುಂಕೆ, ವಿಶ್ವನಾಥ ಚೌಹಾಣ, ವಿಜಯ ರಾಠೋಡ್, ಪಂಡಿತ ಚೌಹಾಣ, ಅಶೋಕ ರಾಥೋಡ್, ರಂಗನಾಥ ಪವಾರ, ಭೀಮು ರಾಠೋಡ್, ಅನಿಲ ರಾಠೋಡ್, ನೇತಾಜಿ ಪವಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.