ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಳಿಕೋಟೆ: ಮೀಸಲಾತಿ ನಮ್ಮ ಹಕ್ಕು- ಕೆ.ಪಿ.ನಂಜುಂಡಿ

ತಾಳಿಕೋಟೆ ತಾಲ್ಲೂಕು ವಿಶ್ವಕರ್ಮ ಸಮಾಜದ ಸಮಾವೇಶ
Last Updated 5 ಮಾರ್ಚ್ 2023, 13:56 IST
ಅಕ್ಷರ ಗಾತ್ರ

ತಾಳಿಕೋಟೆ: ಮೀಸಲಾತಿ ಅಸ್ಪೃಶ್ಯತೆಯಲ್ಲ, ಅದು ನಮಗೆ ವರ, ಅದು ನಮ್ಮ ಹಕ್ಕು ಎಂದು ವಿಧಾನ ಪರಿಷತ್‌, ಸದಸ್ಯ ವಿಶ್ವಕರ್ಮ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಕೆ.ಪಿ.ನಂಜುಂಡಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ತಾಲ್ಲೂಕು ವಿಶ್ವಕರ್ಮ ಸಮಾಜದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ನಾವು ವಿಶ್ವ ಬ್ರಾಹ್ಮಣರೆಂಬ ಭ್ರಮೆ ಹುಟ್ಟಿಸುತ್ತಿದ್ದಾರೆ. ನಾವು ಬ್ರಾಹ್ಮಣರಾದರೆ ಮೀಸಲಾತಿಯಲ್ಲಿ ನಮ್ಮನ್ನೇಕೆ ಇತರೆ ಹಿಂದುಳಿದ ವರ್ಗಗಳ ಜೊತೆ ಸೇರಿಸುತ್ತಿದ್ದರು ಹೇಳಿ? ಸಂವಿಧಾನದಲ್ಲಿ ಪ್ರತಿಪಾದಿಸಿರುವಂತೆ ನಾವೊಂದು ಶೋಷಿತ ಸಮಾಜ, ನಮ್ಮ ವೃತ್ತಿಗಳಿಂದಲೇ ಬದುಕಲಾಗದವರು ನಾವು ಎಂದರು.

ದೇಶದಲ್ಲಿ 12 ಕೋಟಿ, ರಾಜ್ಯದಲ್ಲಿ 40 ಲಕ್ಷ ಜನರಿದ್ದೇವೆ. ಆದರೂ ಮೀಸಲಾತಿ ದೊರೆತಿಲ್ಲ, ದೇವರನ್ನು ಸೃಷ್ಟಿ ಮಾಡುವವರಿಗೇಕೆ ಈ ರಾಜಕೀಯ ಆರ್ಥವಾಗುತ್ತಿಲ್ಲ, ಎಚ್ಚೆತ್ತುಕೊಳ್ಳಿ, ಒಗ್ಗಟ್ಟಾಗಿ, ಕ್ರಿಯೆ ಮತ್ತು ಜ್ಞಾನ ನಮ್ಮ ರಕ್ತದಲ್ಲಿದೆ. ರಾಜಕೀಯ ಪ್ರಾತಿನಿಧ್ಯ ನಮಗೆ ಆರ್ಥಿಕ ಸಬಲತೆಗೆ, ಶಿಕ್ಷಣದ ಉದ್ಯೋಗದ ಅವಕಾಶಕ್ಕೆ, ಗೌರವಯುತ ಬದುಕಿಗೆ ಬೇಕು ಎಂದರು.

ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ಪ್ರತಿ ವಸ್ತುವಿಗೂ ಜೀವಕಳೆ ತುಂಬಿದವರು, ಮಹಾ ತಂತ್ರಜ್ಞರು ವಿಶ್ವಕರ್ಮರು. ದೇಶದ ಭವ್ಯ ದೇವಸ್ಥಾನಗಳಲ್ಲಿರುವ ಕೌಶಲಪೂರ್ಣ, ಬೆಲೆಕಟ್ಟಲಾಗದ ತಂತ್ರಜ್ಞಾನ ಅವರದು ಎಂದರು.

ಎಸ್.ಟಿ ಜನಾಂಗಕ್ಕೆ ಅವರನ್ನು ಸೇರಿಸಬೇಕೆಂಬ ಬೇಡಿಕೆಗೆ ಬೆಂಬಲಿಸುವೆ, ಅವರೊಂದಿಗೆ ಬೇಡ ಜನಾಂಗ, ಹಾಲು ಮತ ದಂತಹ ಹಿಂದುಳಿದ ಸಮಾಜಗಳೆಲ್ಲರ ಹಲವರು ಬೇಡಿಕೆಗೂ ನ್ಯಾಯ ನೀಡಬೇಕಿದೆ ಎಂದರು.

ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿ, ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ಅಗತ್ಯ ನೆರವಿನ ಭರವಸೆ ನೀಡಿದರು.

ಮಾಜಿ ಸಚಿವ ಸಿ.ಎಸ್.ನಾಡಗೌಡ ಅಪ್ಪಾಜಿ, ವಿಶ್ವದಲ್ಲಿ ಆವಿಷ್ಕಾರ ಆರಂಭವಾಗಿದ್ದೇ ವಿಶ್ವಕರ್ಮ ಸಮಾಜದಿಂದ, ಭೂಮಿಯ ಎಲ್ಲ ಮಾನವ ಜನಾಂಗದ ವೃತ್ತಿಗಳಿಗೆ, ಬದುಕಿಗೆ ನೆರವಾದ ಸಮಾಜ ಎಂದರು.

ಶ್ರೀಕಾಂತ ಪತ್ತಾರ ಉಪನ್ಯಾಸ ನೀಡಿದರು. ಹೃದಯತಜ್ಞ ಡಾ.ಶಂಕ್ರಗೌಡ ಬಿ ಪಾಟೀಲ ಮಾತನಾಡಿದರು.

ನಾಲತವಾಡದ ಬ್ರಹ್ಮಾಂಡಭೇರಿ ಮಠದ ಗಂಗಾಧರಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಿಳಗೂಳದ ಶ್ರೀಚಕ್ರಬಗಳಾಂಬಾ ಶಕ್ತಿಪೀಠದ ಮಹೇಂದ್ರಾನಂದತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.

ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಭಾಕರ ಬಡಿಗೇರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಗೌಡ ಬಿರಾದಾರ ಅಸ್ಕಿ, ಎಸ್.ಎಸ್.ವಿದ್ಯಾಸಂಸ್ಥೆ ಅಧ್ಯಕ್ಷ ಎಚ್.ಎಸ್.ಪಾಟೀಲ ಮುದ್ದೇಬಿಹಾಳ ಪುರಸಭೆ ಸದಸ್ಯೆ ಸಹನಾ ಬಡಿಗೇರ, ನಿವೃತ್ತ ಶಿಕ್ಷಕ ಆರ್.ಆರ್.ಬಡಿಗೇರ, ಪತ್ರಕರ್ತ ಜಿ.ಟಿ.ಘೋರ್ಪಡೆ ಹುಣಸಗಿ, ಸಾಹಿತಿ ಮನು ಪತ್ತಾರ, ಅಶೋಕ ಹಂಚಲಿ, ಸುಮಂಗಲಾ ಕೋಳೂರ, ಕಾಳಪ್ಪ ಇವಣಗಿ, ಗೋಪಾಲಕೃಷ್ಞ ಪತ್ತಾರ ಇದ್ದರು.

ತಾಳಿಕೋಟೆಯಲ್ಲಿ ವಿಶ್ವಕರ್ಮರ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಗೊಂಬೆಗಳ ಕುಣಿತ ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT