ಮಂಗಳವಾರ, ನವೆಂಬರ್ 24, 2020
27 °C
ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗವಹಿಸಿದರೆ ಗಡಿಪಾರು ಮಾಡುವ ಎಚ್ಚರಿಕೆ

ವಿಜಯಪುರ: ಪಿಸ್ತೂಲ್‌ ಖರೀದಿಸಿದ ರೌಡಿಗೆ ಎಸ್‌ಪಿ ಕಪಾಳಮೋಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ ನಗರದ ಪೊಲೀಸ್‌ ಮೈದಾನದಲ್ಲಿ ಶುಕ್ರವಾರ ನಡೆದ ರೌಡಿ ಪರೇಡ್‌ನಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್, ಅಕ್ರಮವಾಗಿ ಪಿಸ್ತೂಲ್‌ ಖರೀದಿಸಿ‌ ರೌಡಿಯೊಬ್ಬನ ಜುಟ್ಟ ಹಿಡಿದು, ಕಪಾಳಮೋಕ್ಷ ಮಾಡಿದರು –ಪ್ರಜಾವಾಣಿ ಚಿತ್ರ

ವಿಜಯಪುರ: ನಗರದ ಪೊಲೀಸ್‌ ಮೈದಾನದಲ್ಲಿ ಶುಕ್ರವಾರ ನಡೆದ ರೌಡಿ ಪರೇಡ್‌ನಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್, ಅಕ್ರಮವಾಗಿ ಪಿಸ್ತೂಲ್‌ ಖರೀದಿಸಿ‌ ರೌಡಿಯೊಬ್ಬನಿಗೆ ಕಪಾಳಮೋಕ್ಷ ಮಾಡಿದರು.

ನಗರ ಸೇರಿದಂತೆ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳು, ರೌಡಿಗಳ ಕಾಳಗ ಮತ್ತು ಗುಂಡಿನ ದಾಳಿಯಿಂದ ಎಚ್ಚೆತ್ತಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೌಡಿಗಳ ಹೆಡೆಮುರಿ ಕಟ್ಟುವ ಎಚ್ಚರಿಕೆ ನೀಡಿದರು.

ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗವಹಿಸಿದರೆ ಗಡಿಪಾರು ಮಾಡುವ ಎಚ್ಚರಿಕೆ ನೀಡಿದರು.

ಅಕ್ರಮವಾಗಿ ಪಿಸ್ತೂಲ್‌, ಚಾಕು, ಚೈನ್‌ ಸೇರಿದಂತೆ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಸುತ್ತಾಡುವಂತಿಲ್ಲ. ಕೋಕಾ ಕಾಯ್ದೆಯಡಿ ಕ್ರಮಕೈಗೊಳ್ಳಲಾಗುವುದು ಎಂದು ಸೂಚಿಸಿದರು. 

ರೌಡಿಗಳ ಸದ್ಯದ ಚಲನವಲಯದ ಬಗ್ಗೆ ಮಾಹಿತಿ ಪಡೆದರು. ಪರೇಡ್‌ನಲ್ಲಿ ವಿಜಯಪುರ ಉಪ ವಿಭಾಗ ವ್ಯಾಪ್ತಿಯ 115 ರೌಡಿಗಳು ಹಾಜರಾಗಿದ್ದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮ ಅರಸಿದ್ಧಿ, ಡಿವೈಎಸ್‌ಪಿ ಕೆ.ಸಿ.ಲಕ್ಷ್ಮಿ ನಾರಾಯಣ, ಸಿಬ್ಬಂದಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು