ತಾಂಬಾ: ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಣ್ಣಹಳ್ಳಿ ಬಂಥನಾಳ. ಈ ಸಣ್ಣಹಳ್ಳಿಯಲ್ಲಿ250 ವರ್ಷಗಳ ಹಿಂದೆ ವೃಷಭಲಿಂಗ ಶಿವಯೋಗಿ ಸ್ಥಾಪಿಸಿದ ವಿರಕ್ತಮಠದ ನಾಲ್ಕನೇ ಪೀಠಾಧಿಪತಿ ಸಂಗನಬಸವ ಸ್ವಾಮೀಜಿ. ತಮ್ಮ ಜ್ಞಾನ, ಧರ್ಮಶ್ರದ್ಧೆಯಿಂದ ಮಠ ಲೋಕ ವಿಖ್ಯಾತಿ ಗಳಿಸುವಂತೆ ಶ್ರಮಿಸಿದರು.

ವೃಷಭಲಿಂಗರು, ಶಂಕರಲಿಂಗರು, ಸಂಗನಬಸವಶಿವಯೋಗಿಗಳ ಪಾವನ ಸಾನ್ನಿಧ್ಯದಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ತನ್ನದೇಯಾದ ಹೆಸರು ಮಾಡಿತು.

ಸಂಗನಬಸವ ಸ್ವಾಮೀಜಿ ಮಠದ ಪೀಠಾಧಿಪತಿಗಳಾದ ನಂತರ 1954ರಲ್ಲಿ 770 ಅಮರಗಣಂಗಳ ಪೂಜೆ ನೆರೆವೇರಿಸಿದರು. ಕರ್ನಾಟಕ, ಮಹಾರಾಷ್ಟ್ರದ ರಾಜ್ಯ ಎಲ್ಲೆಡೆ ಸುತ್ತಾಡಿ ತಮ್ಮ ಪ್ರವಚನದ ಮೂಲಕ ಹೆಸರು ಮಾಡಿದರು. ದಿವ್ಯ ತೇಜಸ್ಸು, ವಿರಕ್ತಿಭಾವದಿಂದ ಬಂದ ಹಣವನ್ನು ಶಿಕ್ಷಣಕ್ಕಾಗಿ ದಾಸೋಹ ಮಾಡಿದರು.

ವಿಜಯಪುರದಲ್ಲಿ ಬಿಎಲ್ಡಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಬರದ ನಾಡಿಗೆ ಶಿಕ್ಷಣದ ಮಹಾಪೂರವನ್ನೇ ಹರಿಸಿದರು. ಬರ, ಬಡತನ, ಅಜ್ಞಾನ, ಮೂಢನಂಬಿಕೆಗಳಿಂದ ಜನರ ಬವಣೆ ದೂರ ಮಾಡಿದರು. ನೈತಿಕ ಜಾಗೃತಿಯನ್ನು ಮೂಡಿಸಿ ಶಿಕ್ಷಣವಂತರ ನಾಡನ್ನಾಗಿ ಬೆಳೆಸಿದರು. ತಮ್ಮ ಜೀವಿತಾವಧಿಯುದ್ದಕ್ಕೂ ಸಮಾಜದ ಅಭ್ಯುದಯಕ್ಕೆ ಕೆಲಸ ಮಾಡಿದ ಶ್ರೀಗಳ ನಂತರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತು.

ಉತ್ತರಾಧಿಕಾರಿ ಆಯ್ಕೆ: ಹುನಗುಂದದ ಸೊಪ್ಪಿಮಠದ ಆಚಾರ ಸಂಪನ್ನ ಬಸಯ್ಯ ಮತ್ತು ಶರಣಮ್ಮನವರು ಒಂದು ಮಂಟಪದ ಪೂಜೆ ವಹಿಸಿದ್ದರು. ಮೊದಲಿನಿಂದಲೂ ಅವರನ್ನು ಬಲ್ಲ ಸಂಗನಬಸವ ಶಿವಯೋಗಿಗಳು ತುಂಬ ಸಂತೃಪ್ತರಾಗಿ ನೀವು ಆದರ್ಶ ಶರಣ ದಂಪತಿ ನಿಮ್ಮ ಸಂತಾನ ಮಠವನ್ನು ಬೆಳಗಲಿ ಎಂದು ಆಶೀರ್ವದಿಸಿದರಂತೆ. ಶ್ರೀಗಳ ಮಾತಿನಂತೆ ಅವರ ಉದರದಲ್ಲಿ ಜನಿಸಿದ ಮೂರನೇ ಸುಪುತ್ರನೇ ಕುಮಾರಸಂಗನಬಸವ.

ಅವರನ್ನೇ ಶ್ರೀಗಳು 1962ರಲ್ಲಿ ಮಠದ ಉತ್ತರಾಧಿಕಾರಿಗಳನ್ನಾಗಿ ಘೋಷಿಸಿದರು. ಕುಮಾರ ಸಂಗನಬಸವರು ವೃಷಭಲಿಂಗ ಶಿವಯೋಗಿ ಎಂಬ ಅಭಿದಾನ ಪಡೆದು 5ನೇ ಪೀಠಾಧಿಪತಿಯಾಗಿ ಅಧಿಕಾರ ಸ್ವೀಕರಿಸಿದರು. ತಡವಲಗಾ ಪಟ್ಟದ್ದೇವರು ಜಂಗಮದೀಕ್ಷೆ ನೀಡಿದರು. ಹುಬ್ಬಳ್ಳಿ ಮೂರು ಸಾವಿರಮಠದಲ್ಲಿದ್ದು ಶಿಕ್ಷಣ ಪಡೆದು ಮಠದ ಅಭಿವೃದ್ಧಿಗೆ ಶ್ರಮಿಸಿದರು. ಮುರುಗೋಡದ ಮಹಾನ್ ತಪಸ್ವಿ ಮಹಾಂತಪ್ಪಗಳಿಂದ ‘ಬಂಥನಾಳದ ‘ಭಾಗ್ಯ ಎಂದು ಕರೆಸಿಕೊಂಡರು.

1971 ನವೆಂಬರ್ ತಿಂಗಳಲ್ಲಿ ಸಂಗನಬಸವ ಶಿವಯೋಗಿಗಳು ಅಸ್ವಸ್ಥರಾದಾಗ ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ ವೃಷಭಲಿಂಗರನ್ನು ಕರೆಯಿಸಿಕೊಂಡರು ಪ್ರೀತಿ ವಾತ್ಸಲ್ಯಗಳಿಂದ ಮುಂದೆ ಕೊರಿಸಿಕೊಂಡು ‘ವೃಷಭಲಿಂಗ ನೀನು ನುಡಿದರೆ ಮುತ್ತಿನ ಹಾರದಂತಿರಬೇಕು. ಮಾತು ಕಡಿಮೆ ಜಾಸ್ತಿ ಮೌನ ವಹಿಸಬೇಕು. ಇದು ಒಳ್ಳೆಯ ಲಕ್ಷಣ. ಮಾತುಗಾರಿಕೆಯ ಮಹಿಮೆ ಬಹು ದೊಡ್ಡದು, ಸುತ್ತಲಿದ್ದವರನ್ನು ಸಮ ಭಾವದಿಂದ ಸಂತೈಸಿ ಎತ್ತ ಹೋದರು ಪ್ರೀತಿಗಳಿಸು ಬಾಳು’ ಎಂದು ಆಶೀರ್ವದಿಸಿ ಲಿಂಗದಲ್ಲಿ ಲೀನರಾದರು

ಶ್ರೀಗಳ ಸಾಧನೆ

1923 ರಲ್ಲಿ ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪ ನೇತೃತ್ವದಲ್ಲಿ ರಾಷ್ಟ್ರೀಯ ದೀಕ್ಷೆ ಸ್ವೀಕಾರ.

1925 ರಲ್ಲಿ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರು ಸ್ಥಾಪಿಸಿದ ವಿಜಯಪುರ ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಅಧ್ಯಕ್ಷರಾಗಿ ಸೇವೆ.

1950 ರಲ್ಲಿ ಸರ್ವಧರ್ಮ ಸಮ್ಮೇಳನ ಆಯೋಜನೆ.

1953ರಲ್ಲಿ ಸೊನ್ನದಲ್ಲಿ 63 ಪುರಾತನ ಮಂಟಪ ಪೂಜೆ.

1954 ರಲ್ಲಿ ವಿಜಯಪುರ ನಗರದಲ್ಲಿ 770 ಅಮರಗಣಾಧೀಶ್ವರರ ಪೂಜೆ.

1968 ರಲ್ಲಿ ವೃಷಭಲಿಂಗ ಮಹಾಶಿವಯೋಗಿಗಳನ್ನು ಬಂಥನಾಳ–ಲಚ್ಯಾಣ ಮಠದ ಪೀಠಾಧಿಪತಿಗಳನ್ನಾಗಿ ನೇಮಕ.

1969 ರಲ್ಲಿ ಲಚ್ಯಾಣದಲ್ಲಿ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಅಮರಗಣಾಧೀಶ್ವರರ ಪೂಜೆ ಲಕ್ಷದೀಪೋತ್ಸವದಂತಹ ಮಹಾನ್ ಧಾರ್ಮಿಕ ಕಾರ್ಯಕ್ರಮ ಆಯೋಜನೆ.

1972 ರ ಮೇ 7 ರಂದು ಬಂಥನಾಳದಲ್ಲಿ ಲಿಂಗೈಕ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.