ಚಡಚಣ: ಬಂಜಾರಾ ಸಮೂದಾಯದ ಆಧ್ಯಾತ್ಮಿಕ ಗುರು,ಮೂಢ ನಂಬಿಕೆ,ಪ್ರಾಣಿ ಬಲಿ ನಿರ್ಮೂಲನೆ ಹಾಗೂ ಅರಣ್ಯ ವಾಸಿಗಳ ಹಕ್ಕುಗಾಗಿ ಶ್ರಮಿಸಿದ ಶ್ರೀ ಸಂತ ಸೇವಾಲಾಲ ಮಹಾರಾಜರು ಓರ್ವ ಮಹಾನ್ ಸಮಾಜ ಸುಧಾರಕರಾಗಿದ್ದರು ಎಂದು ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಅವರು ಹೇಳಿದರು.

ಪಟ್ಟಣದ ಪ್ರವಾಶಿ ಮಂದಿರದಲ್ಲಿ ಭಾನುವಾರ ಆಯೋಜಿಸಲಾದ ಶ್ರೀ ಸಂತ ಸೇವಾಲಾಲ್ ಮಹಾರಾಜರ 287ನೇ ಜಯಂತೋತ್ಸವ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಂಜಾರಾ ಸಮೂದಾಯವು ವಿಶಿಷ್ಟ ಧಾರ್ಮಿಕ ಆಚಾರ ವಿಚಾರ ಸಂಸ್ಕೃತಿ, ಸಂಪ್ರದಾಯ ಹೊಂದಿದೆ. ಬಂಜಾರ ಸಮುದಾಯ ಹೆಣ್ಣು ಮಕ್ಕಳಲ್ಲಿ ಕುಟುಂಬ ನಿರ್ವಹಣೆಯ ಶ್ರಮವಿದೆ ಎಂದರು.

ತಹಶೀಲ್ದಾರ್ ಸಂಜಯ ಇಂಗಳೆ ಮಾತನಾಡಿ, ಬಂಜಾರ ಸಮಾಜದ ಜನ ಸಹೃದಯಿಗಳು, ಜಾನಪದ ಶ್ರೀಮಂತಿಕೆಗೆ ಈ ಸಮುದಾಯದ ಹೆಸರುವಾಸಿಯಾಗಿದೆ. ಸಂತ ಸೇವಾಲಾಲ ಅಹಿಂಸಾ ಮಾರ್ಗವಾದಿಗಳು. ಬಸವಣ್ಣನವರ ನಂತರ 18 ನೇ ಶತಮಾನದಲ್ಲಿ ಪವಾಡ ಪುರುಷ. ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅನುಸರಿಸಿ ಅಳವಡಿಸಿಕೊಂಡು ಹೋಗಬೇಕು ಎಂದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರವಿಕುಮಾರ ಜಾಧವ ಮಾತನಾಡಿ, ತಾಲ್ಲೂಕಿನ ಕೆಲವು ಬಂಜಾರಾ ಸಮುದಾಯ ಊರುಗಳಿಗೆ ತೆರಳಲು ರಸ್ತೆ , ಸಮುದಾಯ ಭವನ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ಹೇಳಿದರು.

ತಾಪಂ ಇ.ಒ ಸಂಜಯ ಖಡಗೇಕರ, ವಿಜಯಕುಮಾರ ಹವಾಲ್ದಾರ, ಪಪಂ ಉಪಾಧ್ಯಕ್ಷ ಇಲಾಯಿ ನದಾಫ, ಡಿ ಎಲ್ ಚವ್ಹಾಣ, ಕಾಮೇಶ ಪಾಟೀಲ, ಆರ್ ಡಿ ಹಕ್ಕೆ, ವಸಂತ ಪವಾರ, ದಯಾನಂದ ಪಾಟೀಲ, ಸಂತೋಷ ಗೌಡ ಪಾಟೀಲ, ಬಸುಸೌಹುಕಾರ ಬಿರಾದಾರ, ಮಹಾದೇವ ಹಿರೇಕುರಬರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.