ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಾಪುರ ಸಿದ್ದೇಶ್ವರ ಜಾತ್ರೆ

Last Updated 11 ಜನವರಿ 2023, 15:30 IST
ಅಕ್ಷರ ಗಾತ್ರ

ಸೋಲಾಪುರ: ನಗರದ ಕುಲದೇವತೆಯಾದ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಾತ್ರೆಯು ಜನವರಿ 13 ರಿಂದ 16ರ ವರೆಗೆ ನಡೆಯಲಿದೆ.

ಧಾರ್ಮಿಕ ವಿಧಿವಿಧಾನಗಳು ಸಿದ್ದೇಶ್ವರ ಯೋಗದಂಡದೊಂದಿಗೆ ಪ್ರಾರಂಭವಾಗಿವೆ. 13 ರಂದು ನಂದಿಧ್ವಜ ಮೆರವಣಿಗೆ, ಅಮೃತಲಿಂಗಕ್ಕೆ ಅಭಿಷೇಕ ಹಾಗೂ 68 ಲಿಂಗಗಳ ತೈಲಾಭಿಷೇಕ, 14ರಂದು ಅಕ್ಷತಾ ಕಾರ್ಯಕ್ರಮ, 15ರಂದು ಹೋಮ ಹವನ ಹಾಗೂ 16ರಂದು ಮದ್ದು ಸುಡುವ ಕಾರ್ಯಕ್ರಮವಿದೆ ಎಂದು ಜಾತ್ರೆಯ ಪ್ರಮುಖ ಮಾನಕರಿ ರಾಜಶೇಖರ ಹಿರೆಹಬ್ಬು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಶ್ರೀ ಸಿದ್ಧೇಶ್ವರ ಜಾತ್ರೆಗೆ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಂದ ಭಕ್ತರು ಬರುವುದರಿಂದ ಭಕ್ತರ ಸುರಕ್ಷತೆ ದೃಷ್ಟಿಯಿಂದ ಜಾತ್ರೆ ನಡೆಯುವ ಹೋಮ ಮೈದಾನದಲ್ಲಿ 40 ಸಿಸಿಟಿವಿ ಕ್ಯಾಮೆರಾಗಳನ್ನು ಹಾಗೂ ದೇವಸ್ಥಾನದ ಸುತ್ತಮುತ್ತಲು 32 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ದೇವಸ್ಥಾನ ಪಂಚ ಕಮಿಟಿಯ ಅಧ್ಯಕ್ಷ ಧರ್ಮರಾಜ ಕಾಡಾದಿ ಮಾಹಿತಿ ನೀಡಿದರು.

ಜಾತ್ರೆಯಲ್ಲಿ 250 ರಿಂದ 300 ಅಂಗಡಿ ಮಳಿಗೆಗಳಿರಲಿವೆ. ಅವುಗಳಲ್ಲಿ ಹೊರ ರಾಜ್ಯದವರಿಗೆ ಶೇ 20 ರಷ್ಟು ನೀಡಿದರೆ ಸ್ಥಳೀಯರಿಗೆ ಶೇ 80 ರಷ್ಟು ನೀಡಲಾಗಿದೆ. ಅಕ್ಷತಾ ಕಾರ್ಯಕ್ರಮ ಹೋಮ ಹವನ ಮದ್ದು ಸುಡುವ ಕಾರ್ಯಕ್ರಮಗಳ ನೇರ ಪ್ರಸಾರವನ್ನು ದೂರದರ್ಶನ ಹಾಗೂ ಆಕಾಶವಾಣಿಗಳಿಗೆ ಲಭ್ಯವಾಗುವಂತೆ ಯೋಜನೆ ಮಾಡಲಾಗಿದೆ ಎಂದು ಜಾತ್ರಾ ಸಮಿತಿಯ ಅಧ್ಯಕ್ಷ ಸಿದ್ರಾಮಪ್ಪ ಬಮಣಿ ಹಾಗೂ ಮಿಲಿಂದ ಥೋಬಡೆ ವಕೀಲರು ತಿಳಿಸಿದರು.

ಶ್ರೀ ಸಿದ್ದೇಶ್ವರ ಜಾತ್ರೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಜಾತ್ರಾ ಕಮಿಟಿ ಹಾಗೂ ಪಂಚ ಕಮಿಟಿಯವರು ವಹಿಸಿದ ಎಲ್ಲಾ ಕೆಲಸಗಳನ್ನು ಜವಾಬ್ದಾರಿಯಿಂದ ಮಾಡಬೇಕು. ಹೋಂ ಮೈದಾನದಲ್ಲಿ ಜನರ ಹಿತದೃಷ್ಟಿಯನ್ನು ಗಮನದಲ್ಲಿ ಇರಿಸಿ ಆಪತ್ಕಾಲಿನ ರಸ್ತೆ, ವೈದ್ಯಕೀಯ ಸೇವೆ, ಪೊಲೀಸ್ ಬಂದೋಬಸ್ತ್, ಆಹಾರದ ನಿಯಮಿತ ತಪಾಸಣೆ ಎಲ್ಲವೂ ವ್ಯವಸ್ಥಿತ ಯೋಜನೆಯಂತೆ ಇರಬೇಕೆಂದು ಜಿಲ್ಲಾ ಆಪತ್ತು ನಿರ್ವಹಣಾ ಪ್ರಾಧಿಕಾರ ಪೂರ್ವಭಾವಿ ಸಭೆಯಲ್ಲಿ ಉಪಜಿಲ್ಲಾಧಿಕಾರಿ ಶಮಾ ಪವಾರ ಅವರು ವಿವಿಧ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಹಶೀಲ್ದಾರ್ ದತ್ತಾತ್ರೇಯ ಮೋಹಾಳೆ, ಮಹಾನಗರ ಪಾಲಿಕೆ ಹೆಚ್ಚುವರಿ ಆಯುಕ್ತ ಸಂದೀಪ್ ಕಾರಂಜೆ, ಜಿಲ್ಲಾ ಆಪತ್ತು ನಿರ್ವಹಣಾಧಿಕಾರಿ ಶಕ್ತಿಸಾಗರ ಢೋಲೆ, ವಿವಿಧ ವಿಭಾಗದ ಅಧಿಕಾರಿಗಳು ಪಂಚ ಕಮಿಟಿ ಹಾಗೂ ಜಾತ್ರಾ ಕಮಿಟಿಯ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT