ನಾಲತವಾಡ: ಸಮೀಪದ ವೀರೇಶನಗರ ಹಾಗೂ ನಾಗಬೇನಾಳ ಗ್ರಾಮದ ವಿದ್ಯಾರ್ಥಿಗಳಿಗಾಗಿ ಶಾಲಾ ಸಮಯಕ್ಕೆ ವಿಶೇಷ ಬಸ್ ಯೋಜನೆ ಮಾಡಲಾಗಿದೆ.

ಜು ಲೈ 18 ರಂದು ಗುರುವಾರ ಬೆಳಿಗ್ಗೆ ವೀರೇಶನಗರ ಹಾಗೂ ನಾಗಬೇನಾಳ ಗ್ರಾಮದ ವಿದ್ಯಾರ್ಥಿಗಳು ಶಾಲಾ ಸಮಯಕ್ಕೆ ಬಸ್ಗಳು ಬರುತ್ತಿಲ್ಲ, ಕೆಲವು ಬಸ್ಗಳನ್ನು ನಮ್ಮ ಗ್ರಾಮದಲ್ಲಿ ನಿಲುಗಡೆ ಮಾಡುತ್ತಿಲ್ಲ ಎಂದು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಸಮಸ್ಯೆ ಬಗೆಹರಿಸುವಂತೆ ಭರವಸೆ ನೀಡಿ ಪ್ರತಿಭಟನೆ ಹಿಂಪಡೆಯುವಂತೆ ಮಾನವಿ ಮಾಡಿದ್ದರು. ಬಳಿಕ ವಿದ್ಯಾರ್ಥಿಗಳು ಹೋರಾಟ ಕೈಬಿಟ್ಟಿದ್ದರು.

ಈ ಕುರಿತು ‘ಪ್ರಜಾವಾಣಿ’ಯಲ್ಲಿ ಶುಕ್ರವಾರ ವರದಿಯೂ ಪ್ರಕಟವಾಗಿತ್ತು.

ಅಧಿಕಾರಿಗಳ ಸ್ಪಂದನೆ: ‘ಮಕ್ಕಳಿಗೆ ಶಾಲಾ ಸಮಯಕ್ಕೆ ಸರಿಯಾಗಿ ತೆರಳಲು ಮತ್ತು ಮರಳಿ ಗ್ರಾಮಕ್ಕೆ ಬರಲು ಶಾಲಾ ಸಮಯಕ್ಕೆ ಒಂದು ವಿಶೇಷ ಬಸ್ ಮಂಜೂರು ಮಾಡಿದ್ದೇವೆ’ ಎಂದು ಮುದ್ದೇಬಿಹಾಳ ಸಾರಿಗೆ ಘಟಕದ ವ್ಯವಸ್ಥಾಪಕ ಎ.ಎಚ್.ಮದಭಾವಿ ತಿಳಿಸಿದರು.

ನಾಲತವಾಡ ಸಾರಿಗೆ ನಿಯಂತ್ರಕ ರಜಾಕ್ ನಾಡದಾಳ, ಆದಪ್ಪ ಗಂಗನಗೌಡರ, ಆರ್.ಆರ್.ಜಾಧವ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.