ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀ ಸಿದ್ಧೇಶ್ವರ ಜಾತ್ರೆ: ದರ್ಶನ ಪ‍ಡೆದ ಸಚಿವ

ಭಕ್ತರಿಂದ ಹೋಮ, ಹವನ, ಪೂಜೆ ಸಂಭ್ರಮ
Last Updated 15 ಜನವರಿ 2022, 14:15 IST
ಅಕ್ಷರ ಗಾತ್ರ

ಸೋಲಾಪುರ:ಇಲ್ಲಿನ ಶ್ರೀ ಸಿದ್ದೇಶ್ವರ ಜಾತ್ರೆ ನಿಮಿತ್ಯವಾಗಿಜಿಲ್ಲಾ ಉಸ್ತುವಾರಿ ಸಚಿವ ದತ್ತಾತ್ರೆಯ ಭರಣೆ ಅವರು ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿ, ದೇವರ ದರ್ಶನ ಪಡೆದರು.

‘ಕೊರೋನಾದಿಂದ ತತ್ತರಿಸಿರುವ ಸೋಲಾಪುರದ ಜನರಿಗೆ ಸುಖ ಶಾಂತಿ ಸಮೃದ್ಧಿಯನ್ನು ನೀಡು ದೇವರೇ’ ಎಂದು ಅವರು ಶ್ರೀ ಸಿದ್ದೇಶ್ವರ ದೇವರಲ್ಲಿ ಬೇಡಿಕೊಂಡರು.

ಕೋರೋನಾ ಇನ್ನು ಸಂಪೂರ್ಣವಾಗಿ ಕಡಿಮೆಯಾಗಿಲ್ಲ ಕಳೆದ ಕೆಲವು ದಿನಗಳಿಂದ ಪ್ರಮಾಣ ಹೆಚ್ಚಾಗುತ್ತಿದೆ. ಯಾರೊಬ್ಬರೂ ನಿರ್ಲಕ್ಷ್ಯ ವಹಿಸದೇ ಕುಟುಂಬದ ಕಾಳಜಿ ವಹಿಸಬೇಕು ಎಂದರು.

15 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದರು.

ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷ ಧರ್ಮರಾಜ ಕಾಡಾದಿ, ಸುರೇಶ, ಸಂತೋಷ ಪವಾರ, ಕಿಸನ ಜಾಧವ, ತೌಫಿಕ ಶೇಖ್‌, ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಹೋಮ ಹವನ, ಪೂಜೆ:

ಕೋವಿಡ್ ನಿರ್ಬಂಧಗಳ ನಡುವೆಯೂ ಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಭಕ್ತರು ಉತ್ಸಾಹ, ಸಡಗರ, ಸಂಭ್ರಮದಿಂದ ಹೋಮ, ಹವನ, ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಶ್ರೀ ಸಿದ್ದೇಶ್ವರ ಮಹಾರಾಜ ಕಿ ಜೈ, ಹರ್ ಬೋಲಾ ಹರ್ ಹರ್... ಎಂಬ ಜಯಘೋಷ ಮೊಳಗಿತು.

ಕೋವಿಡ್ ಹಿನ್ನೆಲೆಯಲ್ಲಿ ಭಕ್ತರು ದೂರದಿಂದ ನಿಂತು ಕಾರ್ಯಕ್ರಮ ವೀಕ್ಷಿಸಿದರು.

ಹೊಟಗಿ ಮಠದ ಡಾ.ಮಲ್ಲಿಕಾರ್ಜುನ ಶಿವಾಚಾರ್ಯರು ಹಾಗೂ ಆರ್ಚಕ ಹಿರೇ ಹಬ್ಬು ಪೂಜೆ ಸಲ್ಲಿಸಿದರು.

ಶಾಸಕ ವಿಜಯಕುಮಾರ್ ದೇಶಮುಖ, ವಿಶ್ವನಾಥ ಚಾಕೋತೆ, ಜಾತ್ರಾ ಸಮಿತಿ ಅಧ್ಯಕ್ಷ ಭೀಮಾಶಂಕರ್ ಪಠನೆ, ದಾದಾಸಾಹೇಬ್ ಬೋಗಡೆ, ಸಿದ್ದಾರಾಮ ಚಾಕೋತೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT