ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಮನ ಆದರ್ಶ ಗುಣ ರೂಢಿಸಿಕೊಳ್ಳಿ’

ಬಸವನಾಡಲ್ಲಿ ಶ್ರೀರಾಮ ನವಮಿ ಸಂಭ್ರಮ
Last Updated 10 ಏಪ್ರಿಲ್ 2022, 14:22 IST
ಅಕ್ಷರ ಗಾತ್ರ

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ರಾಮನವಮಿಯನ್ನು ಶ್ರದ್ಧೆ,ಭಕ್ತಿ ಸಂಭ್ರಮದಿಂದ ಆಚರಿಸಲಾಯಿತು.

ನಗರದ ಝೆಂಡಾ ಕಟ್ಟಿ ಹಳಕೇರಿ ಗಲ್ಲಿಯ ಗಾಯಿ ಚಾಳ್ ಬಳಿ ಇರುವ ಶ್ರೀ ಪ್ರಸನ್ನೇಶ್ವರ-ಶ್ರೀ ಪ್ರಸನ್ನಾಂಜನೇಯ ದೇವಸ್ಥಾನದಲ್ಲಿ ಶ್ರೀರಾಮ ನವಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಬೆಳಿಗ್ಗೆ ಸುಪ್ರಭಾತದ ಬಳಿಕ ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ಶ್ರೀ ರಾಮದೇವರ ತೊಟ್ಟಿಲೋತ್ಸವ, ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.

ಶ್ರಿ ಪ್ರಸನ್ನೇಶ್ವರ ಸೇವಾ ಭಜನಾ ಮಂಡಳಿ ಸದಸ್ಯರಿಂದ ರಾಮ ನಾಮದ ಭಕ್ತಿ ಸಂಗೀತ ಸೇವೆ ಅತ್ಯಂತ ಸುಶ್ರಾವ್ಯವಾಗಿ ನಡೆಯಿತು.

ರಾಮ ತೋಟ್ಟಿಲೋತ್ಸವದ ಸಂದರ್ಭದಲ್ಲಿ ನೂರಾರು ಭಕ್ತರು ಭಾಗವಹಿಸಿ ಬಾಲ ರಾಮನ ಸುಂದರ ರೂಪವನ್ನು ಮನದಲ್ಲಿ ತುಂಬಿಕೊಂಡರು. ದೇವಸ್ಥಾನದ ಅರ್ಚಕ ಪ್ರಕಾಶಾಚಾರ್ಯ ಮದಭಾವಿ ನೇತ್ರತ್ವ ವಹಿಸಿದ್ದರು.

ನಾಗೇಶರಾವ ಕುಲಕರ್ಣಿ, ಭೀಮರಾವ ಥೊಬ್ಬಿ, ರಾಮರಾವ ಅಪ್ಪಾರಾವ ಕುಲಕರ್ಣಿ(ತಾಂಬಾ), ಆನಂದರಾವ ಗಾಯಿ, ವಸಂತರಾವ ಗಾಯಿ, ಜಗದೀಶ ಕುಲಕರ್ಣಿ, ಅನಿತಾ ಗಾಯಿ ಮುಂತಾದವರು ಭಾಗವಹಿಸಿದ್ದರು.

ನಗರದ ಆಶ್ರಮ ರಸ್ತೆಯ ರಾಮ ಮಂದಿರ, ಕೀರ್ತಿನಗರದ ಸಾಯಿಬಾಬಾ ಮಂದಿರ ಸೇರಿದಂತೆ ವಿವಿಧ ದೇಗುಲಗಳಲ್ಲಿ ರಾಮ ನವಮಿ ಅಂಗವಾಗಿ ವಿಶೇಷ ಪೂಜೆ, ತೊಟ್ಟಿಲೋತ್ಸವ, ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಜನರು ಪಾಲ್ಗೊಂಡು, ಭಕ್ತಿ ಸಮರ್ಪಿಸಿದರು.

ದಿಶಾ ಫೌಂಡೇಶನ್:

ನಗರದ ಮಾರುಕಟ್ಟೆಯಲ್ಲಿರುವ ರಾಮ ಮಂದಿರದ ಪಕ್ಕದಲ್ಲಿ ದಿಶಾ ಫೌಂಡೇಶನ್ ವತಿಯಿಂದ ರಾಮನವಮಿ ಅಂಗವಾಗಿ ಭಕ್ತರಿಗೆ ಮಜ್ಜಿಗೆ ಮತ್ತು ಕೊಸಂಬರಿ ವಿತರಿಸಲಾಯಿತು.

ದಿಶಾ ಫೌಂಡೇಶನ್ ಅಧ್ಯಕ್ಷೆ ಮಂಚಾಲೇಶ್ವರಿ ತೊನಶ್ಯಾಳ, ಶ್ರೀರಾಮನು ದೇಶದ ಸಂಸ್ಕೃತಿ ಹಾಗೂ ಆತ್ಮ ಆಗಿದ್ದಾರೆ. ಬಿಸಿಲಿನಲ್ಲಿ ಶ್ರೀರಾಮನ ದರ್ಶನಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಬಿಸಿಲಿನ ತಾಪ ಕಡಿಮೆ ಮಾಡಲು ಮಜ್ಜಿಗೆ ಮತ್ತು ಕೊಸಂಬರಿ ವಿತರಿಸಲಾಯಿತು ಎಂದರು.

ಸಂಘದ ಸದಸ್ಯರಾದ ಮಂಜುಳಾ ಅಂಗಡಿ, ಕವಿತಾ, ಪ್ರೀತಿ, ಪ್ರೇಮಾ, ಗೀತಾ ಸೇರಿದಂತೆ ಇತರರು ಇದ್ದರು.

ಭಾರತೀಯ ಶಿಕ್ಷಣ ಮಂಡಲ:

ನಗರದ ಆಶ್ರಮ ರಸ್ತೆಯಲ್ಲಿರುವ ಶಾಂತಿನಿಕೇತನ ವಿದ್ಯಾಲಯದಲ್ಲಿಭಾರತೀಯ ಶಿಕ್ಷಣ ಮಂಡಲ ವಿಜಯಪುರ ಜಿಲ್ಲಾ ಘಟಕದ ವತಿಯಿಂದಭಾರತೀಯ ಶಿಕ್ಷಣ ಮಂಡಲ ಸಂಸ್ಥಾಪನಾ ದಿನ, ರಾಮನವಮಿ ಹಾಗೂ ಯುಗಾದಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಭಾರತೀಯ ಶಿಕ್ಷಣ ಮಂಡಲದ ಕರ್ನಾಟಕ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಡಾ.ಎಚ್ ವೆಂಕಟೇಶ, ರಾಮದೇವರ ಮಹಿಮೆಯನ್ನು ತಿಳಿಸುವ ಈ ಹಬ್ಬ ಶಾಂತಿಯ ಸಂಕೇತವಾಗಿದೆ. ಕೆಟ್ಟ ಶಕ್ತಿಗಳು, ಕೆಟ್ಟ ವಾತಾವರಣ ಹಬ್ಬದ ಆಚರಣೆಯಿಂದ ದೂರಾಗುತ್ತವೆ ಎಂದರು.

ಭೂಮಿಯಲ್ಲಿರುವ ಪ್ರತಿಯೊಬ್ಬ ಮನುಷ್ಯನೂ ಶ್ರೀರಾಮನಲ್ಲಿದ್ದ ಗುಣಗಳನ್ನು ತನ್ನಲ್ಲಿ ಬೆಳೆಸಿಕೊಳ್ಳಬೇಕು. ಶ್ರೀರಾಮ ದೇವರಂತಾಗುವ ಪ್ರಯತ್ನವನ್ನೂ ಪ್ರತಿಯೊಬ್ಬನೂ ಮಾಡಬೇಕು ಎಂದು ಹೇಳಿದರು.

ಪ್ರಾಚಾರ್ಯ ಶ್ರೀಧರ ಕುರುಬೆಟ್ಟ ಅಧ್ಯಕ್ಷತೆ ವಹಿಸಿದ್ದರು. ಆನಂದ ಹುಲಮನಿ, ಅಕ್ಷಯ ಕುಲಕರ್ಣಿ, ಶಿವಲಿಂಗ ಮೇತ್ರಿ, ಶರಣು ವಿರಾಪುರ ಇತರರು ಇದ್ದರು.ಸುನೀತಾರಾಣಿ ಪಾಟೀಲಸಂಘಟನಾ ಮಂತ್ರ ಹಾಗೂ ಧ್ಯೇಯವಾಕ್ಯ ಹೇಳಿದರು. ಸಂತೋಷ ಬಂಡೆ ಸ್ವಾಗತಿಸಿದರು. ಸಂತೋಷ ಕಳ್ಳಿಗುಡ್ಡ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT