ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಶೈಲ ಕ್ಷೇತ್ರಕ್ಕೆ ಪಾದಯಾತ್ರೆ: 80ರ ವೃದ್ಧೆ ಹೊತ್ತು ಸಾಗಿದ ಯುವಕ!

Published 6 ಏಪ್ರಿಲ್ 2024, 16:15 IST
Last Updated 6 ಏಪ್ರಿಲ್ 2024, 16:15 IST
ಅಕ್ಷರ ಗಾತ್ರ

ತಿಕೋಟಾ: ಆಂಧ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರಕ್ಕೆ ಕರ್ನಾಟಕದಿಂದ ಲಕ್ಷಾಂತರ ಭಕ್ತರು ವಾಹನ ಹಾಗೂ ಪಾದಯಾತ್ರೆ ಮೂಲಕ ಮಲ್ಲಯ್ಯನ ದರ್ಶನಕ್ಕೆ ಸಾಗುತ್ತಾರೆ. ಕೆಲವರು ಭೀಮನಕೊಳ್ಳದಿಂದ ಮಾತ್ರ ಬೆಟ್ಟಗುಡ್ಡದಲ್ಲಿ ಪಾದಯಾತ್ರೆ ಕೈಗೊಳ್ಳುತ್ತಾರೆ.

ಭೀಮನಕೊಳ್ಳದಿಂದ ಪಾದಯಾತ್ರೆ ಹೊರಟ ಭಕ್ತಾದಿಗಳಲ್ಲಿ ಎಂಬತ್ತರ ವಯಸ್ಸಿನ ಅಥಣಿ ತಾಲ್ಲೂಕಿನ ನಂದೇಶ್ವರ ಗ್ರಾಮದ ದೇವಕಿ ಮಹಾದೇವ ಮೆಲಗಡೆ ಎಂಬ ವೃದ್ಧೆ ಪಾದಯಾತ್ರೆ ಸಂದರ್ಭದಲ್ಲಿ ಸುಸ್ತಾಗಿ ನಡೆಯದೇ ಕುಳಿತ್ತಿದ್ದರು. ಹಲವು ಭಕ್ತರ ಹಾಗೂ ಯುವಕರ ದಂಡು ಪಾದಯಾತ್ರೆ ಮೂಲಕ ಸಾಗುತ್ತಿದ್ದರು. ಅಜ್ಜಿಯನ್ನು ನೋಡಿದ ಸಿಂದಗಿ ಮೂಲದ ಯುವಕ ಸಂದೀಪ ವಡಗೋಗಿ ವೃದ್ಧೆಯನ್ನು ಬೆನ್ನು ಮೇಲೆ ಎತ್ತಿಕೊಂಡು ನಾಲ್ಕೈದು ಕಿ.ಮೀ ಸಾಗಿದನು ಎಂದು ಜೊತೆಯಲ್ಲಿದ್ದ ಅರಣ್ಯ ಅಧಿಕಾರಿ ಪ್ರವೀಣ ಹುನ್ನೂರ ಮಾಹಿತಿ ನೀಡಿದರು.

ಶ್ರೀಶೈಲ ಮಲ್ಲಯ್ಯನ ದರ್ಶನಕ್ಕೆ ಕಾಡಿನಲ್ಲಿ ಸಾಲು ಸಾಲಾಗಿ ಯುವಕರಿಂದ ಹಿಡಿದು ವಯಸ್ಸಾದವರು ಈ ಯುಗಾದಿ ಹಬ್ಬದ ಸಂದರ್ಭದಲ್ಲಿ ಪಾದಯಾತ್ರೆ ಮೂಲಕ ಸಾಗುವ ದೃಶ್ಯ ಕಾಣುತ್ತದೆ.

ಆಂದ್ರಪ್ರದೇಶದ ಶ್ರೀಶೈಲ್ ಕ್ಷೇತ್ರಕ್ಕೆ ಪಾದಯಾತ್ರೆ ಮೂಲಕ ಸಾಗುವಾಗ ಭೀಮನಕೊಳ್ಳದಲ್ಲಿ ಸುಸ್ತಾದ ಅಜ್ಜಿಯನ್ನು ಸಿಂದಗಿ ಮೂಲದ ಯುವಕ ಹೊತ್ತುಕೊಂಡು ಸಾಗುತ್ತಿರುವದು.
ಆಂದ್ರಪ್ರದೇಶದ ಶ್ರೀಶೈಲ್ ಕ್ಷೇತ್ರಕ್ಕೆ ಪಾದಯಾತ್ರೆ ಮೂಲಕ ಸಾಗುವಾಗ ಭೀಮನಕೊಳ್ಳದಲ್ಲಿ ಸುಸ್ತಾದ ಅಜ್ಜಿಯನ್ನು ಸಿಂದಗಿ ಮೂಲದ ಯುವಕ ಹೊತ್ತುಕೊಂಡು ಸಾಗುತ್ತಿರುವದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT