ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಧ್ಯಯನವೇ ಉತ್ತಮ ಶಿಕ್ಷಕನ ಬಂಡವಾಳ’

Last Updated 26 ಮೇ 2022, 15:31 IST
ಅಕ್ಷರ ಗಾತ್ರ

ವಿಜಯಪುರ: ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಪಾಠ ಮಾಡಲು ಶಿಕ್ಷಕನಿಗೆ ಆಳವಾದ ಅಧ್ಯಯನ ಅವಶ್ಯಕತೆ ಇದೆ ಎಂದು ರಾಜ್ಯಶಾಸ್ತ್ರ ನಿವೃತ್ತ ಪ್ರಾಧ್ಯಾಪಕ ಡಾ. ಬಿ.ಎಂ.ಬಿರಾದಾರ ಹೇಳಿದರು.

ಇಲ್ಲಿನ ನವಬಾಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ರಾಜ್ಯಶಾಸ್ತ್ರ ಪ್ರಾಧ್ಯಾಪಕರ ಸಂಘ ಹಾಗೂ ಕಾಲೇಜು ಸಿಬ್ಬಂದಿ ಮತ್ತು ವಿದ್ಯಾರ್ಥಿ ಬಳಗದಿಂದಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ವಿಷಯ ವಸ್ತುವನ್ನು ಮನದಟ್ಟು ಮಾಡುವುದು ನೈಪುಣ್ಯದ ಕೆಲಸ. ಶಿಕ್ಷಕನಾದವನು ಆಳವಾದ ಅಧ್ಯಯನದಲ್ಲಿ ತೊಡಗಿಸಿಕೊಂಡಾಗ, ಅಪಾರ ವಿಷಯ ಪಾಂಡಿತ್ಯ ಹೊಂದಿದಾಗ ಮಾತ್ರ ಮನಮುಟ್ಟುವಂತೆ ಪಾಠ ಮಾಡಲು ಸಾಧ್ಯ. ಆ ನಿಟ್ಟಿನಲ್ಲಿ ಸುದೀರ್ಘ ಅವಧಿ ಸೇವೆ ಸಲ್ಲಿಸಿ, ಎಲ್ಲರ ಮೆಚ್ಚುಗೆಯೊಂದಿಗೆ, ಆತ್ಮೀಯತೆಯೊಂದಿಗೆ ನಿರ್ಗಮಿಸುತ್ತಿರುವುದು ಸಂತಸ ತಂದಿದೆ ಎಂದರು.

ಸಿಬ್ಬಂದಿ ಕಾರ್ಯದರ್ಶಿ ಬಿ.ಜಿ. ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿ, ಸತತ 34 ವರ್ಷಗಳ ಕಾಲ ಡಾ.ಬಿ.ಎಂ. ಬಿರಾದಾರ ಸಲ್ಲಿಸಿದ ಸೇವೆ ಅವಿಸ್ಮರಣೀಯ. ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುವ ಅವರ ಸ್ವಭಾವ ನಿಜಕ್ಕೂ ಆಕರ್ಷಣೀಯ. ಅವರಿಂದು ಸೇವೆಯಿಂದ ಬೀಳ್ಕೊಡುತ್ತಿರುವುದು ಕಷ್ಟವಾದರೂ ಅನಿವಾರ್ಯ ಎಂದರು.

ಕಾಲೇಜಿನ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಅವರು ಪಾಲ್ಗೊಳ್ಳುತ್ತಿದ್ದರು. ಅವರೊಂದಿಗಿನ ಒಡನಾಟ ಮರೆಯಲು ಅಸಾಧ್ಯ ಎಂದರು.

ಡಾ.ಬಿ.ಎಂ. ಕೋರಬು ಮಾತನಾಡಿ, ರಾಜ್ಯಶಾಸ್ತ್ರ ಪ್ರಾಧ್ಯಾಪಕರ ಸಂಘದ ರಾಜ್ಯಾಧ್ಯಕ್ಷರಾಗಿ, ಸಿಂಡಿಕೇಟ್ ಸದಸ್ಯರಾಗಿ ಡಾ.ಬಿ.ಎಂ. ಬಿರಾದಾರ ಮಾಡಿದ ಸೇವೆ ಅಮೋಘ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅವರು ಮಾಡಿದ ಕಾರ್ಯ ಅನನ್ಯ ಎಂದರು.

ಪ್ರಾಂಶುಪಾಲ ಎ.ಟಿ. ಮುದಕಣ್ಣವರ, ಪ್ರೊ.ಎ.ಐ. ಮುಲ್ಲಾ, ಡಾ.ಎಂ.ಐ. ಮಿಂಚ್, ಡಾ. ಆರ್.ಬಿ. ನಾಗರಡ್ಡಿ, ಪ್ರೊ.ನೀಲಮ್ಮ ಹತ್ತಳ್ಳಿ, ಡಾ.ಎಂ.ಆರ್. ಹೂಗಾರ, ಎಂ.ಕೆ. ಪಿತ್ತಳಿ, ಪ್ರೊ.ಎಸ್.ಬಾಪಗೊಂಡ, ಆನಂದ ನಡುವಿನಮನಿ, ಪ್ರೊ.ಎಸ್.ಕೆ. ಜಮಾದಾರ, ಪರಶುರಾಮ ಭಾಸಗಿ, ಭಾರತಿ ಇನಾಮದಾರ, ಎ.ಐ. ಹಂಜಗಿ, ರಾಜಶ್ರೀ ಮಾರನೂರ, ಸಂಗೀತಾ ಕೋಟ್ಯಾಳ, ಚನ್ನಬಸು ಗುಣದಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT